ರಾಷ್ಟ್ರೀಯ

ಅಜ್ಜಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಒಂದೇ ಕುಣಿಕೆಯಲ್ಲಿ ನೇಣಿಗೆ ಶರಣಾದ ಅಮ್ಮ-ಮಗ

Pinterest LinkedIn Tumblr

ಮಹಾರಾಷ್ಟ್ರ: ಅಜ್ಜಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ್ದಿದ್ದ ಮೊಮ್ಮಗ ಹಾಗೂ ಆತನ ತಾಯಿ ಒಂದೇ ಕುಣಿಕೆಯಲ್ಲಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮೃತರನ್ನು 32 ವರ್ಷದ ರೂಪೇಶ್ ಬಾಲಕೃಷ್ಣ ಹಾಗೂ ಆತನ ತಾಯಿ 70 ವರ್ಷದ ಶಶಿಕಲಾ ಫುಸ್ಸೆ ಎಂದು ಗುರುತಿಸಲಾಗಿದ್ದು ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

ರೂಪೇಶ್ ಮುಂಬೈನ ಎಲೆಕ್ಟ್ರಾನಿಕ್ ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಅಜ್ಜಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಿದ್ದರು. ಆ ಬಳಿಕ ತಾಯಿ ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಂಬಂಧಿಕರು ಮನೆಗೆ ಬಂದು ನೋಡಿದಾಗ ತಾಯಿ-ಮಗ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

Comments are closed.