ಗಲ್ಫ್

ಅರಬ್‌ ರಾಷ್ಟ್ರದಿಂದ ಐಸಿಸ್‌ ಸಂಪರ್ಕ ಹೊತ್ತ ಕಾಶ್ಮೀರಿಯ ಗಡಿಪಾರು

Pinterest LinkedIn Tumblr


ಶ್ರೀನಗರ: ಐಸಿಸ್‌ ಉಗ್ರ ಸಂಘಟನೆಯ ಪರ ಒಲವು ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಕಾಶ್ಮೀರಿ ಎಂಜಿನಿಯರ್‌ ಒಬ್ಬನನ್ನು ಅರಬ್‌ ಒಕ್ಕೂಟ ಗಡಿಪಾರುಗೊಳಿಸಿದೆ.

ಇರ್ಫಾನ್‌ ಅಹಮ್ಮದ್‌ ಝರ್ಗರ್‌ ಅರಬ್‌ ರಾಷ್ಟ್ರದಿಂದ ಆಗಸ್ಟ್‌ 14ರಂದು ಗಡಿಪಾರುಗೊಂಡು ಭಾರತಕ್ಕೆ ತಲುಪಿದ್ದಾನೆ. ರಾಷ್ಟ್ರೀಯ ತನಿಖಾ ತಂಡ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಈತನನ್ನು ಒಪ್ಪಿಸಲಾಗಿದೆ. ಈತನ ವಿರುದ್ಧ ರಾಜ್ಯದಲ್ಲಿ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಆರೋಪಿಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಸಿರಿಯಾದಲ್ಲಿ ನಡೆಯುತ್ತಿರುವ ಐಸಿಸ್‌ ಚಟುವಟಿಕೆಗಳ ಬಗ್ಗೆ ಒಲವನ್ನು ವ್ಯಕ್ತಪಡಿಸುತ್ತಿದ್ದ. ಹೀಗಾಗಿ ದುಬೈ ಪೊಲೀಸರು ಏಪ್ರಿಲ್‌ 28ರಂದು ವಶಕ್ಕೆ ಪಡೆದಿದ್ದರು.

ಈತ ದುಬೈನ ಟೆಲಿಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಬಿಸ್‌ನೆಸ್‌ ಸಂಬಂಧ ಒಮನ್‌ಗೆ ಬಂದಿದ್ದಾಗ ಅಲ್ಲಿ ಬಂಧಿಸಲಾಗಿತ್ತು. ಐಸಿಸ್‌ ಉಗ್ರರ ಒಲವು ಹೊಂದಿರುವ ಕಾರಣಕ್ಕೆ ಇತ್ತೀಚೆಗೆ ಭಾರತಕ್ಕೆ ಗಡಿಪಾರುಗೊಂಡ ಮೂರನೇ ವ್ಯಕ್ತಿ ಇರ್ಫಾನ್‌.

Comments are closed.