ರಾಷ್ಟ್ರೀಯ

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ರಿಂದ ಕೇರಳ ಸಂತ್ರಸ್ತರಿಗೆ ನೆರವು

Pinterest LinkedIn Tumblr


ಹೊಸದಿಲ್ಲಿ: ನೆರೆಪೀಡಿತ ಕೇರಳಕ್ಕೆ ಕೇಂದ್ರ ಸರಕಾರ ತುರ್ತು ಪರಿಹಾರ ಪ್ಯಾಕೇಜ್ ನೀಡಿದ ಬೆನ್ನಲ್ಲೇ ಹಲವರು ನೆರವಿನ ಹಸ್ತ ಚಾಚುತ್ತಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್‌ ಕೂಡ ಟ್ವೀಟ್ ಮೂಲಕ ತಾವು ಕೇರಳಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಕೇರಳದಲ್ಲಿ ಭಾರಿ ಪ್ರಮಾಣದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ನೂರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೀಗಿರುವಾಗ ಭಾರತದ ನಮ್ಮ ಸಹೋದರರಿಗೆ ನೆರವು ನೀಡುವುದನ್ನು ಮರೆಯದಿರೋಣ ಎಂದು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಯುಎಇಯ ಪ್ರಗತಿಯಲ್ಲಿ ಕೇರಳದ ಪಾಲು ಬಹಳಷ್ಟಿದೆ. ಭಾರತೀಯ ಸಮುದಾಯಕ್ಕೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ. ಪ್ರತಿಯೊಬ್ಬರೂ ಅವರಿಗೆ ನೆರವು ನೀಡಲು ಮರೆಯದಿರೋಣ. ವಿಶೇಷವಾಗಿ ಬಕ್ರೀದ್ ಸಂದರ್ಭದಲ್ಲಿ ಸಹಾಯ ಮಾಡುವ ಮೂಲಕ ಅವರಿಗೆ ನೆರವಾಗೋಣ ಎಂದು ಹೇಳಿದ್ದಾರೆ.

ಕೇರಳದ ಬಹುಪಾಲು ಮಂದಿ ಅರಬ್ ರಾಷ್ಟ್ರಗಳಲ್ಲಿ ವಿವಿಧ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಬಹುತೇಕ ಎಲ್ಲ ವಿಭಾಗದಲ್ಲೂ ಆವರಿಸಿಕೊಂಡಿದ್ದಾರೆ. ಹೀಗಾಗಿ ಯುಎಇ ದೊರೆ ಕೇರಳವನ್ನು ನೆನಪಿಸಿಕೊಂಡಿದ್ದಾರೆ.

Comments are closed.