ರಾಷ್ಟ್ರೀಯ

ಕಣ್ಣಿನ ಪಾಪೆ , ಬೆರಳು ಮುದ್ರೆಗಳ ಜೊತೆ ಸೆಪ್ಟೆಂಬರ್ 15ರಿಂದ ಆಧಾರ್ ಮುಖ ದೃಢೀಕರಣ ಸೌಲಭ್ಯ

Pinterest LinkedIn Tumblr


ಹೊಸದಿಲ್ಲಿ: ಕಳೆದ ಕೆಲ ಕಾಲದಿಂದ ಮುಂದೂಡುತ್ತಾ ಬಂದಿದ್ದ ಆಧಾರ್ ಮುಖ ದೃಢೀಕರಣ (face authentication) ಸೌಲಭ್ಯವನ್ನು ಕೊನೆಗೂ ಮುಂದಿನ ತಿಂಗಳಿಂದ ಜಾರಿಗೆ ತರಲು ಭಾರತ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ನಿರ್ಧರಿಸಿದೆ. ಸೆಪ್ಟೆಂಬರ್ 15ರಿಂದ ಹಂತಹಂತವಾಗಿ ಜಾರಿಗೆ ತರಲಾಗುತ್ತದೆ ಎಂದು ಯುಐಡಿಎಐ ತಿಳಿಸಿದೆ.

ಮೊದಲು ಟೆಲಿಕಾಂ ಸರ್ವೀಸ್ ಪ್ರೊವೈಡರ್‌ಗಳ ಜತೆಗೆ ಈ ಸೌಲಭ್ಯವನ್ನು ಪ್ರಾರಂಭಿಸುವುದಾಗಿ ಹೇಳಿದೆ. ಆಧಾರ್‌ಗಾಗಿ ಸದ್ಯಕ್ಕೆ ಕಣ್ಣಿನ ಪಾಪೆ (ಐರಿಸ್), ಬೆರಳು ಮುದ್ರೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮುಖ ದೃಢೀಕರಣ ಸಹ ಸೇರಿಸಬೇಕೆಂದು ಕಳೆದ ವರ್ಷ ಯುಐಡಿಎಐ ನಿರ್ಧರಿಸಿದ್ದು ಗೊತ್ತೇ ಇದೆ. ಮೊದಲು ಜುಲೈ 1ರಿಂದ ಈ ಸೌಲಭ್ಯ ಜಾರಿಗೊಳಿಸಲು ಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಆಗಸ್ಟ್ 1ಕ್ಕೆ ಮುಂದೂಡಲಾಗಿತ್ತು.

ಆದರೆ ಈ ತಿಂಗಳಲ್ಲೂ ಆಧಾರ್ ಮುಖ ದೃಢೀಕರಣ ಜಾರಿಗೆ ಬರಲಿಲ್ಲ. ಇದೀಗ ಸೆಪ್ಟೆಂಬರ್ 15ರಿಂದ ಜಾರಿಗೆ ತರುವುದಾಗಿ ಯುಐಡಿಎಐ ಸ್ಪಷ್ಪಪಡಿಸಿದೆ. ಫಿಂಗಲ್ ಪ್ರಿಂಟ್‌ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳ ಜತೆಗೆ ಮೋಸ ಮಾಡುವ ಸಾಧ್ಯತೆಗಳೂ ಇರುವ ಕಾರಣ ಯುಐಡಿಎಐ ಈ ಹೊಸ ಸೌಲಭ್ಯವನ್ನು ಜಾರಿಗೆ ತರುತ್ತಿದೆ. ಫಿಂಗರ್ ಪ್ರಿಂಟ್, ಐರಿಸ್‌ಗಳ ಜತೆಗೆ ಆಧಾರನ್ನು ದೃಢೀಕರಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಈ ಮುಖ ದೃಢೀಕರಣ ಸೌಲಭ್ಯ ಬಳಸಿಕೊಳ್ಳಬಹುದು.

ಹಂತಹಂತವಾಗಿ ಈ ಸೌಲಭ್ಯವನ್ನು ಜಾರಿಗೆ ತರಲು ಯುಐಡಿಎಐ ನಿರ್ಧರಿಸಿದೆ. ಮೊದಲು ಟೆಲಿಕಾಂ ಸರ್ವೀಸ್ ಪ್ರೊವೈಡರ್‌ಗಳೊಂದಿಗೆ ಪ್ರಾರಂಭಿಸಲಿದೆ. ಸೆಪ್ಟೆಂಬರ್ 15ರಿಂದ ಒಟ್ಟು ತಿಂಗಳ ವ್ಯವಹಾರದಲ್ಲಿ ಕನಿಷ್ಠ ಶೇ.10ರಷ್ಟು ಮುಖ ದೃಢೀಕರಣದ ಮೂಲಕ ನೀಡಬೇಕೆಂದು ಯುಐಡಿಎಐ ಆದೇಶಿಸಿದೆ. ಒಂದು ವೇಳೆ ಸಾಧ್ಯವಾಗದಿದ್ದರೆ ಒಂದೊಂದು ವ್ಯವಹಾರಕ್ಕೆ ತಲಾ 20 ಪೈಸೆಯಂತೆ ಶುಲ್ಕ ವಿಧಿಸುವುದಾಗಿ ಹೇಳಿದೆ.

Comments are closed.