ಮನೋರಂಜನೆ

ವಾಜಪೇಯಿಗೆ ಜಾಮೂನು ನೀಡದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್!

Pinterest LinkedIn Tumblr

ನವದೆಹಲಿ: ಸಿಹಿಖಾದ್ಯ ಪ್ರಿಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸಮುದ್ರದ ಸಿಗಡಿ ಮೀನಿನ ಖಾದ್ಯವೆಂದರೆ ಪಂಚ ಪ್ರಾಣವೇ ಆಗಿತ್ತು. ಆದರೆ ಅದೊಮ್ಮೆ ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಅಟಲ್ ಅವರಿಗೆ ಅವರ ಪ್ರಿಯ ಖಾದ್ಯ ಜಾಮೂನು ತಿನ್ನುವುದನ್ನು ತಪ್ಪಿಸಿದ್ದರೆಂದರೆ ನಂಬುತ್ತಿರಾ?
ಹೌದು, ಮಧುಮೇಹದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವೈದ್ಯರು ಪಥ್ಯಾಹಾರ ಶಿಫಾರಸು ಮಾಡಿದ್ದರು. ಅದಾಗೊಮ್ಮೆ ಸರ್ಕಾರಿ ಪೌತಣ ಕೂಟದಲ್ಲಿ ಖಾದ್ಯ ಕೌಂಟರ್ ನಲ್ಲಿಟ್ಟಿದ್ದ ಜಾಮೂನು ಸೇವನೆಗೆ ಮುಂಡ್ಗಿದ್ದರು. ಆತಕ್ಷಣ ಅವರ ಜತೆಗಿದ್ದವ್ರು ಅವರ ಗಮನ ಬೇರೆಡೆ ಸೆಳೆಯುವಂತೆ ಮಾಡಲು ವಾಜಪೇಯಿ ಅವರಿಗೆ ಸಮೀಪದಲ್ಲಿದ್ದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಪರಿಚಯಿಸುತ್ತಾರೆ.
ಮಾಧುರಿ ದೀಕ್ಷಿತ್ ಅವರೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಲೋಕಾಭಿರಾಮವಾಗಿ ಮಾತನಾಡುತ್ತಾ ಇರುವಾಗಲೇ ಖಾದ್ಯ ಕೌಂಟರ್ ನಲ್ಲಿದ್ದ ಸಿಬ್ಬಂದಿ ವಾಜಪೇಯಿಯವರ ಪಥ್ಯದ ನಿಷೇಧವಿದ್ದ ಆಹಾರ ೯ಜಾಮೂನು) ವನ್ನು ಅಲ್ಲಿಂದ ಸ್ಥಳಾಂತರಿಸಿದ್ದರು.

ಇನ್ನು ವಾಜಪೇಯಿ ಪ್ರವಾಸದಲ್ಲಿದ್ದಾಗಲೆಲ್ಲಾ ಅಲ್ಲಲ್ಲಿನ ಸ್ಥಳೀಯ ಖಾದ್ಯಗಳ ಸವಿ ಸವಿಯಲು ಬಯಸುತ್ತಿದ್ದರು. ಅದು ಕೋಲ್ಕತ್ತಾವಾಗಿರಲಿ, ಹೈದರಾಬಾದ್ ಆಗಿರಲಿ, ಲಖನೌ ಆಗಿರಲಿ ಆಯಾ ಸ್ಥಳದ ವಿಶೇಷ ತಿನಿಸನ್ನು ಸವಿಯುವುದೆಂದರೆ ವಾಜಪೇಯಿಯವರಿಗೆ ಎಲ್ಲಿಲ್ಲದ ಪ್ರೀತಿ.
ತಾವು ಸ್ವತಃ ಓರ್ವ ಬಾಣಸಿಗರಾಗಿದ್ದ ವಾಜಪೇಯಿ ಮನೆಗೆ ಆಗಮಿಸಿದವರಿಗೆ ತಮ್ಮ ಕೈಯಾರೆ ಅಡಿಗೆ ಮಾಡಿ ಬಡಿಸುತ್ತಿದ್ದರೆ. ಅಲ್ಲದೆ ಸಚಿವ ಸಂಪುಟ ಸಭೆ ನಡೆವ ವೇಳೆ ಹುರಿದ ಕಡಲೆಕಾಳು, ತಿನ್ನುವುದು ಇವರ ಖಯಾಲಿಯಾಗಿತ್ತು. ಆಲೂ ಚಿಪ್ಸ್, ಕಬಾಬ್, ಸಿಗಡಿ ಮೀನಿನ ಖಾದ್ಯ ಹೀಗೆ ನಾನಾ ವಿಧದ ಭಕ್ಷ್ಯಗಳನ್ನು ವಾಜಪೇಯಿ ಸವಿದಿದ್ದರು. ವೆಂಕಯ್ಯ ನಾಯ್ಡು, ಲಾಲ್ ಜೀ ಟಂಡನ್ ಹೀಗೆ ನಾನಾ ಮುಖಂಡ್ರು ವಾಜಪೇಯಿಯವರನ್ನು ಭೇಟಿಯಾಗುವುದಕ್ಕೆ ಹೊರಟಾಗ ಸಹ ಅವರಿಗಿಷ್ಟವಾದ ಖಾದ್ಯಗಳನ್ನು ಜತೆಗೆ ಒಯ್ಯುತ್ತಿದ್ದರು.
ವಾಜಪೇಯಿ ಅಸ್ವಸ್ಥರಾದ ಬಳಿಕ ಸಹ ಸಮೋಸಾ, ಗೋಡಂಬಿಗಳನ್ನು ಸದಾ ಇಷ್ಟಪಟ್ಟು ಸವಿಯುತ್ತಿದ್ದರು.

Comments are closed.