ರಾಷ್ಟ್ರೀಯ

ಕಾಶ್ಮೀರಕ್ಕೆ ಮುಸ್ಲಿಂ ಮುಖ್ಯಮಂತ್ರಿ ಸಹಿಸೆವು: ಸುಬ್ರಮಣಿಯನ್‌ ಸ್ವಾಮಿ

Pinterest LinkedIn Tumblr


ಹೊಸದಿಲ್ಲಿ : ಜಮ್ಮು ಕಾಶ್ಮೀರದ ಹೊಸ ಮುಖ್ಯಮಂತ್ರಿ ಹಿಂದು ಧರ್ಮದವರೇ ಆಗಿರಬೇಕು ಎಂದು ಭಾರತೀಯ ಜನತಾ ಪಕ್ಷದ ಉರಿ ನಾಲಗೆಯ ಸಂಸದ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಮುಸ್ಲಿಮರನ್ನು ಸಂಪ್ರೀತಗೊಳಿಸುವ ಸಲುವಾಗಿ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮ್‌ ಮುಖ್ಯಮಂತ್ರಿಯನ್ನೇ ಸ್ಥಾಪಿಸುವ ಕೆಟ್ಟ ಸಂಪ್ರದಾಯವನ್ನು ಹಾಕಿದರು ಎಂದು ಸುಬ್ರಮಣಿಯನ್‌ ಸ್ವಾಮಿ ಟೀಕಿಸಿದರು.

ಒಂದೊಮ್ಮೆ ಪಿಡಿಪಿಯಲ್ಲಿ ಹಿಂದು ಅಥವಾ ಸಿಕ್ಖ್ ಶಾಸಕ ಇದ್ದಿದ್ದರೆ ಅಂಥವರನ್ನು ನಾವು ಸಿಎಂ ಮಾಡಬಹುದಿತ್ತು. ಆದರೆ ಜಮ್ಮು ಕಾಶ್ಮೀರಕ್ಕೆ ಮುಸ್ಲಿಂ ವ್ಯಕ್ತಿಯನ್ನೇ ಸಿಎಂ ಮಾಡಬೇಕೆಂಬ ನೆಹರೂ ಅವರ ಹೇರಿಕೆಯನ್ನು ಇನ್ನು ಸಹಿಸಲಾಗದು ಎಂದು ಸ್ವಾಮಿ ಹೇಳಿದರು.

ಭಾರತೀಯ ಜನತಾ ಪಕ್ಷಕ್ಕೆ ಹಿಂದುತ್ವದಿಂದ ಮಾತ್ರವೇ ಓಟು ದೊರಕೀತೇ ಹೊರತು ಆರ್ಥಿಕಾಭಿವೃದ್ಧಿ ಘೋಷಣೆಗಳಿಂದ ಅಲ್ಲ ಎಂದು ಸ್ವಾಮಿ ಹೇಳಿದರು.

Comments are closed.