ರಾಷ್ಟ್ರೀಯ

ಪತ್ರಕರ್ತ ಶುಜಾತ್‌ ಬುಖಾರಿ ಹತ್ಯೆ ಮಾಸ್ಟರ್ ಮೈಂಡ್ ಬೆಂಗಳೂರಿನಲ್ಲಿ ಎಂಬಿಎ ಪಡೆದಿದ್ದ

Pinterest LinkedIn Tumblr


ಹೊಸದಿಲ್ಲಿ: ಪತ್ರಕರ್ತ ಶುಜಾತ್‌ ಬುಖಾರಿ ಹತ್ಯೆಗೆ ಸಂಚು ರೂಪಿಸಿದ ಕಿಂಗ್‌ ಪಿನ್‌ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಎಂಬಿಎ ಪದವಿ ಪಡೆದಿರುವುದಾಗಿ ತಿಳಿದು ಬಂದಿದೆ.

ಲಷ್ಕರ್‌-ಎ-ತೊಯ್ಬ(ಎಲ್‌ಇಟಿ)ಗೆ ಯುವಕರನ್ನು ಸೇರಿಸುತ್ತಿದ್ದ ಸಜ್ಜದ್‌ ಗುಲ್‌ ಹತ್ಯೆಯ ರುವಾರಿ ಎಂದು ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.

ಬುಖಾರಿ ಅವರನ್ನು ಹತ್ಯೆ ಮಾಡಲು ಎಲ್‌ಇಟಿ ಮುಖ್ಯಸ್ಥ ಹಫೀಜ್‌ ಸಯೀದ್‌ ಹಾಗೂ ಗುಲ್‌ ಕಾಶ್ಮೀರದ ಸ್ಥಳೀಯ ಉಗ್ರವಾದಿಗಳಿಗೆ ಆದೇಶ ನೀಡಿದ್ದಾರೆ. ರೈಸಿಂಗ್‌ ಕಾಶ್ಮೀರ ಪತ್ರಿಕೆ ಮೂಲಕ ಪಾಕಿಸ್ತಾನದ ಪೋಷಣೆಯಲ್ಲಿರುವ ಉಗ್ರ ಸಂಘಟನೆಗಳ ಮೇಲೆ ಪತ್ರಿಕೆ ನಿಷ್ಟುರವಾಗಿತ್ತು. ಇದೇ ಹಿನ್ನೆಲೆಯಲ್ಲಿ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಎಂಬಿಎ ಪದವೀಧರನಾದ ಗುಲ್‌, ಉಗ್ರ ಸಂಘಟನೆಗೆ ಸೇರಿಕೊಳ್ಳುವ ಮೊದಲು ಪ್ರಯೋಗಾಲಯದಲ್ಲಿ ತಂತ್ರಜ್ಞನಾಗಿಯೂ ತರಬೇತಿ ಪಡೆದಿದ್ದ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಗುಲ್‌ ಹೆಚ್ಚು ತೊಡಗಿಸಿಕೊಂಡಿದ್ದಾನೆ. ಪ್ರಸ್ತುತ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನೆಲೆಸಿರುವುದಾಗಿ ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಶುಜಾತ್‌ ಬುಖಾರಿ ಕೊಲೆ: ಲಷ್ಕರ್‌-ಎ-ತೊಯ್ಬಾ ಕೈವಾಡ ಶಂಕೆ

ಕಾಶ್ಮೀರದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವವರನ್ನು ಉಗ್ರ ಸಂಘಟನೆ ಗುರಿ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಗುಲ್‌ನನ್ನು ಈ ಹಿಂದೆ ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಶ್ರೀನರ ಸೆಂಟ್ರಲ್‌ ಜೈಲಿನಲ್ಲಿದ್ದ ಆತನನ್ನು ಬಳಿಕ ದೆಹಲಿಯ ತಿಹಾರ್‌ ಜೈಲಿಗೆ ರವಾನಿಸಲಾಗಿತ್ತು. ಅಲ್ಲಿಂದ ಆತ ಪಾಕಿಸ್ತಾನಕ್ಕೆ ತಪ್ಪಿಸಿಕೊಂಡಿದ್ದಾನೆ ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆ ಸಂಬಂಧ ಬ್ಲಾಗ್‌ ಒಂದರಲ್ಲಿ ಪ್ರಚೋದನಾತ್ಮಕ ಹೇಳಿಕೆಗಳನ್ನು ಪೋಸ್ಟ್‌ ಮಾಡುತ್ತಿದ್ದ ವ್ಯಕ್ತಿಯ ಮಾಹಿತಿ ಕಲೆ ಹಾಕಿರುವ ಪೊಲೀಸರು, ಐಪಿ ವಿಳಾಸ ಪತ್ತೆ ಹಚ್ಚಿದ್ದಾರೆ. ಹಫೀಸ್‌ ನೀಡಿದ ಆದೇಶದಿಂದಲೇ ಬುಖಾರಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ,

Comments are closed.