ರಾಷ್ಟ್ರೀಯ

ಡಿಜಿಟಲ್‌ ವಹಿವಾಟಿಗೆ ಉತ್ತೇಜನ: ಆಕರ್ಷಕ ಕ್ಯಾಶ್‌ಬ್ಯಾಕ್‌, ದರ ಕಡಿತಕ್ಕೆ ಸರಕಾರ ಚಿಂತನೆ

Pinterest LinkedIn Tumblr


ಹೊಸದಿಲ್ಲಿ: ಡಿಜಿಟಲ್‌ ವಹಿವಾಟು ಉತ್ತೇಜನಕ್ಕಾಗಿ ವ್ಯಾಪಾರಿಗಳಿಗೆ ಆಕರ್ಷಕ ಕ್ಯಾಶ್‌ಬ್ಯಾಕ್‌ ಹಾಗೂ ಗ್ರಾಹಕರಿಗೆ ದರ ಕಡಿತದ ಲಾಭವನ್ನು ಒದಗಿಸುವ ಪ್ರಸ್ತಾವವೊಂದನ್ನು ಸರಕಾರ ಸಿದ್ಧಪಡಿಸುತ್ತಿದೆ.

ಕಂದಾಯ ಇಲಾಖೆ ಸಿದ್ಧಪಡಿಸುತ್ತಿರುವ ಈ ಪ್ರಸ್ತಾವದಲ್ಲಿ, ಡಿಜಿಟಲ್‌ ವಿಧಾನದ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಯಲ್ಲಿ ಕಡಿತ ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇಂತಹ ದರ ಕಡಿತವನ್ನು ಗರಿಷ್ಠ 100 ರೂ.ಗಳಿಗೆ ಮಿತಿಗೊಳಿಸುವ ಬಗ್ಗೆಯೂ ಸರಕಾರ ಚಿಂತಿಸಿದೆ.

ವ್ಯಾಪಾರಿಗಳಿಗೆ, ಅವರು ನಡೆಸುವ ಒಟ್ಟಾರೆ ಡಿಜಿಟಲ್‌ ವಹಿವಾಟಿನ ಮೊತ್ತಕ್ಕೆ ಕ್ಯಾಶ್‌ಬ್ಯಾಕ್‌ ಪಡೆಯಲಿದ್ದಾರೆ.

ದೇಶದಲ್ಲಿ ಡಿಜಿಟಲ್‌ ವಹಿವಾಟುಗಳನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಈ ಪ್ರಸ್ತಾಪವನ್ನು ಮೇ 4ರಂದು ವಿತ್ತ ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆಯುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಂಡಿಸಲಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿವೆ.

ಈಗಾಗಲೇ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಡಿಜಿಟಲ್ ವಹಿವಾಟುಗಳಿಗೆ ಕ್ಯಾಶ್‌ಬ್ಯಾಕ್ ಮತ್ತು ದರ ಕಡಿತದ ಲಾಭಗಳನ್ನು ಒದಗಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ, ಅವರು ನಡೆಸುವ ಒಟ್ಟಾರೆ ಡಿಜಿಟಲ್‌ ವಹಿವಾಟಿನ ಮೇಲೆ ಕ್ಯಾಶ್‌ಬ್ಯಾಕ್‌ ಜತೆಗೆ ತೆರಿಗೆ ಲಾಭವನ್ನೂ ನೀಡುವ ಚಿಂತನೆ ನಡೆದಿದೆ.

Comments are closed.