ರಾಷ್ಟ್ರೀಯ

ಬ್ಯಾಂಕ್‍ಗಳಿಗೆ ಶನಿವಾರದಿಂದ (ಏ.28) ನಾಲ್ಕು ದಿನ ರಜೆ

Pinterest LinkedIn Tumblr


ಹೊಸದಿಲ್ಲಿ: ಬ್ಯಾಂಕ್‌ಗಳಿಗೆ ಶನಿವಾರದಿಂದ ಮತ್ತೆ ಸಾಲುಸಾಲು ರಜೆಗಳು ಬರುತ್ತಿವೆ. ಕೆಲವು ರಾಜ್ಯಗಳಲ್ಲಿ ಬ್ಯಾಂಕ್‍ಗಳಿಗೆ ನಾಳೆಯಿಂದ (ಶನಿವಾರ ಏ.28) ಮಂಗಳವಾರದವರೆಗೂ ರಜೆ. ಏಪ್ರಿಲ್ 28ರಂದು ನಾಲ್ಕನೇ ಶನಿವಾರ ಆಗಿರುವ ಕಾರಣ ಎಂದಿನಂತೆ ಬ್ಯಾಂಕ್‍ಗಳಿಗೆ ರಜೆ. ಏಪ್ರಿಲ್ 29ರಂದು ಭಾನುವಾರ, ಸೋಮವಾರ ಬುದ್ಧ ಪೂರ್ಣಿಮೆ, ಮಂಗಳವಾರ ಕಾರ್ಮಿಕರ ದಿನಾಚರಣೆ.

ಸೋಮವಾರ, ಮಂಗಳವಾರ ಎಲ್ಲಾ ರಾಜ್ಯಗಳಲ್ಲಿ ಒಮ್ಮೆಲೆ ಬ್ಯಾಂಕ್‌ಗಳು ಬಂದ್ ಆಗಲ್ಲ. ನೆಗೋಷಿಯಬಲ್ ಇನ್‍ಸ್ಟ್ರುಮೆಂಟ್ ಕಾಯಿದೆ ಪ್ರಕಾರ ಈ ರಜೆಗಳನ್ನು ಬ್ಯಾಂಕ್‌ಗಳು ಪಾಲಿಸುತ್ತವೆ. ಬುದ್ಧ ಪೂರ್ಣಿಮೆ (ಸೋಮವಾರ) ಮಹಾರಾಷ್ಟ್ರ, ದಿಲ್ಲಿ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ್, ಉತ್ತರ ಪ್ರದೇಶ, ಹರಿಯಾಣದಲ್ಲಿ ಬ್ಯಾಂಕ್‌ಗಳಿಗೆ ರಜೆ.

ಕಾರ್ಮಿಕರ ದಿನಾಚರಣೆಗೆ (ಮಂಗಳವಾರ) ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಗೋವಾಗಳಲ್ಲಿ ರಜೆ ಇರುತ್ತದೆ. ಈ ರಜೆಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇದ್ದರೂ ಎಟಿಎಂ‌ಗಳಲ್ಲಿ ಹಣವನ್ನು ಭರ್ತಿ ಮಾಡುತ್ತೇವೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್‍ ಯಾವುದೇ ರೀತಿಯಲ್ಲೂ ವ್ಯತ್ಯಯ ಆಗಲ್ಲ. ಎಂದಿನಂತೆ ಮುಂದುವರೆಸಬಹುದು ಎಂದಿವೆ ಬ್ಯಾಂಕ್‍ಗಳು. ಇತ್ತೀಚೆಗೆ ನಗದು ಕೊರತೆಯಿಂದ ನಮ್ಮ ರಾಜ್ಯವೂ ಸೇರಿದಂತೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಜನ ತೀವ್ರ ತೊಂದರೆಗೆ ಒಳಗಾಗಿದ್ದು ಗೊತ್ತೇ ಇದೆ. ಈಗಲೂ ಕೆಲವು ಕಡೆ ನಗದು ಕೊರತೆ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ.

Comments are closed.