ರಾಷ್ಟ್ರೀಯ

ಚೆನ್ನೈ ಗೋಲ್ಡ್‌ ಸಂಸ್ಥೆಯ 143 ಕೋಟಿ ಆಸ್ತಿ ಮುಟ್ಟುಗೋಲು

Pinterest LinkedIn Tumblr


ಚೆನ್ನೈ: 824 ಕೋಟಿ ರೂ.ಬ್ಯಾಂಕ್‌ ಸಾಲ ವಂಚಿಸಿರುವ ಚೆನ್ನೈ ಮೂಲಕ ಚಿನ್ನಾಭರಣ ಸಂಸ್ಥೆಯೊಂದರ 143 ಕೋಟಿ ರೂ. ಮೌಲ್ಯದ ಠೇವಣಿಗಳನ್ನು ಜಾರಿ ನಿರ್ದೇಶನಾಲಾಯ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ವರದಿಯಾಗಿದೆ.

ಕ್ರಿಝ್ ಬ್ರಾಂಡ್‌ ನೇಮ್‌ ಹೊಂದಿರುವ ಚಿನ್ನಾಭರಣಗಳನ್ನು ಮಾರುತ್ತಿದ್ದ ಚೆನ್ನೈನ Kanishk Gold Pvt Ltd 824 ಕೋಟಿ ರೂ. ಬ್ಯಾಂಕ್‌ ಸಾಲವನ್ನು ವಂಚಿಸಿರುವ ಆರೋಪ ಹೊಂದಿದೆ. ಕೆಲ ದಿನಗಳ ಹಿಂದಷ್ಟೇ ಜಾರಿ ನಿರ್ದೇಶನಾಲಯ ಈ ಸಂಸ್ಥೆಯ ಪ್ಲಾಂಟ್‌ ಆ್ಯಂಡ್‌ ಮಶಿನರಿ ರೂಪದಲ್ಲಿದ್ದ 48 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿತ್ತು. ಇದೀಗ ಅದರ ಬಳಿ ಇದ್ದ 143.58 ಕೋಟಿ ರೂ. ಮೌಲ್ಯದ ಠೇವಣಿಗಳನ್ನು ಇಡಿ ವಶಪಡಿಸಿಕೊಂಡಿದೆ.

ಜಾರಿ ನಿರ್ದೇಶನಾಲಯ ಈಗ ಮುಟ್ಟುಗೋಲು ಹಾಕಿರುವ ಒಟ್ಟು ಆಸ್ತಿ ಮೌಲ್ಯ 191 ಕೋಟಿ ರೂ. ಆಗಿದೆ. Kanishk Gold Pvt Ltd ವಿರುದ್ಧ ಬ್ಯಾಂಕ್‌ ಸಾಲ ವಂಚನೆ ಬಗ್ಗೆ ಸರ್ವಪ್ರಥಮವಾಗಿ ಎಸ್‌ಬಿಐ, ಸಿಬಿಐಗೆ ದೂರು ನೀಡಿತ್ತು.

-ಉದಯವಾಣಿ

Comments are closed.