ಗಲ್ಫ್

ಬಹರೈನ್ ಕನ್ನಡ ಸಂಘದಿಂದ ” ವಸಂತೋತ್ಸವ” ವಕ್ಕೆ ಕ್ಷಣಗಣನೆ ; ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನೂತನ ಆಡಳಿತ ಮಂಡಳಿಯ ಪದಗ್ರಹಣ

Pinterest LinkedIn Tumblr

ಮನಾಮ , ಬಹರೈನ್ : ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘವು ಪ್ರತಿ ವರುಷದಂತೆಯೇ ಈ ವರುಷ ಕೂಡ ಋತುಗಳ ರಾಜ ವಸಂತನ ಆಗಮನವನ್ನು ವರ್ಣರಂಜಿತವಾಗಿ ಸ್ವಾಗತಿಸಲು ರೂಪುರೇಷೆಗಳನ್ನು ಹಾಕಿಕೊಂಡಿದ್ದು “ವಸಂತೋತ್ಸವ -2018” ಕಾರ್ಯಕ್ರಮಕ್ಕೆ ಇದಾಗಲೇ ಕ್ಷಣಗಣನೆ ಆರಂಭವಾಗಿದೆ . ಕಾರ್ಯಕ್ರಮವು ಇದೇ ಏಪ್ರಿಲ್ ತಿಂಗಳ 27 ರ ಶುಕ್ರವಾರದಂದು ಸಂಜೆ 6 ಘಂಟೆಗೆ ಇಲ್ಲಿನ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಜರುಗಲಿರುವುದು .

ಖ್ಯಾತ ಪ್ರಶಸ್ತಿ ವಿಜೇತ ಸಾಹಿತಿ ,ಬರಹಗಾರ ಪ್ರಸಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಡಾಕ್ಟರ್ ಮನು ಬಳಿಗಾರ್ ರವರು ವಿಶೇಷವಾಗಿ ದ್ವೀಪ ರಾಷ್ಟ್ರಕ್ಕೆ ಆಗಮಿಸಿ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಪಾಲೊಗೊಳ್ಳಲಿದ್ದಾರೆ . ತನ್ನ ಕಂಠ ಮಾಧುರ್ಯ ಹಾಗು ಚಿತ್ರ ಕಲೆಯ ಮುಖೇನ ಮನೆಮಾತಾಗಿರುವ ಕರಾವಳಿಯ ಬಹುಮುಖ ಪ್ರತಿಭೆ ಶಬರಿ ಗಾಣಿಗರವರು ಕ್ಯಾನ್ವಾಸ್ ನಲ್ಲಿ ತಮ್ಮ ಕೈಚಳಕದ ಜೊತೆಗೆ ತಮ್ಮ ಕಂಠ ಮಾಧುರ್ಯ ದಿಂದ ದ್ವೀಪದ ಕನ್ನಡಿಗರನ್ನು ರಂಜಿಸಲಿದ್ದಾರೆ . ಸುಮಾರು 3000ಕ್ಕೂ ಹೆಚ್ಚು ಕಲಾ ಪ್ರದರ್ಶನಗಳನ್ನು ನೀಡಿರುವ ಶಬರಿ ಗಾಣಿಗರವರು ಸುಮಾರು2000 ಕ್ಕಿಂತಲೂ ಹೆಚ್ಚಿನ ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ . ತಮ್ಮ ಕಂಠ ಮಾಧುರ್ಯದಿಂದಾಗಿ ಚಲನ ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ,ಕಂಠ ದಾನ ಕಲಾವಿದೆಯಾಗಿಯೂ ತಮ್ಮ ಬಹುಮುಖ ಪ್ರತಿಭೆಯನ್ನು ಮೆರೆದಿದ್ದಾರೆ . ಕನ್ನಡ ಸಂಘದ ಕಲಾವಿದರುಗಳು ಈ ಕಾರ್ಯಕ್ರಮದಲ್ಲಿ ವೈವಿಧ್ಯಮಯವಾದ ನ್ರತ್ಯಗಳು ,ನ್ರತ್ಯ ರೂಪಕಗಳನ್ನು ಪ್ರದರ್ಶಿಸಲಿದ್ದಾರೆ . ಕನ್ನಡ ಸಂಘದ ಮುಂದಿನ ಅವಧಿಗೆ ನೂತನ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದಿದ್ದು ಅದರ ವಿದ್ಯುಕ್ತ ಪದಗ್ರಹಣವೂ ಈ ಕಾರ್ಯಕ್ರಮದಲ್ಲಿ ನಡೆಯಲಿದೆ .

ಕಳೆದ 40 ವರುಷಗಳಿಂದ ಕೊಲ್ಲಿಯ ನೆಲದಲ್ಲಿ ಕನ್ನಡ ಕಲೆ,ಭಾಷೆ ,ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಬಹರೈನ್ ಕನ್ನಡ ಸಂಘವು ಮುಂಚೂಣಿಯಲ್ಲಿದ್ದು ಸಂಘದ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಶ್ರೀ ಪ್ರದೀಪ್ ಶೆಟ್ಟಿ ಯವರು ಕಾರ್ಯನಿರ್ವಹಿಸುತ್ತಿದ್ದಾರೆ . ಈ ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 39147114 ಮುಖೇನ ಸಂಪರ್ಕಿಸಬಹುದು

ವರದಿ- ಕಮಲಾಕ್ಷ ಅಮೀನ್

Comments are closed.