ಕರ್ನಾಟಕ

ಬೃಹತ್‌ ಗ್ರಂಥವಾಯಿತು ರಾಜ್ಯ ಕಾಂಗ್ರೆಸ್‌ ಪ್ರಣಾಳಿಕೆ!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷದಲ್ಲಿ ಏನು ಮಾಡುತ್ತೇವೆ ಎಂದು ಭರವಸೆ ನೀಡುವ ಕಾಂಗ್ರೆಸ್‌ ಪ್ರಣಾಳಿಕೆ ಬೃಹತ್‌ ಗ್ರಂಥದಂತಾಗಿದ್ದು, “ಭಾರ’ ಕಡಿಮೆ ಮಾಡಲು ಸಮಿತಿ ಸದಸ್ಯರು ಹರ ಸಾಹಸ ಪಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯ 34 ಜನರ ಪ್ರಣಾಳಿಕೆ ರಚನಾ ಸಮಿತಿ ರಾಜ್ಯದ ಎಲ್ಲ ಆರು ವಿಭಾಗಗಳಲ್ಲಿ ಪ್ರವಾಸ ಮಾಡಿ, ಸಾರ್ವಜನಿಕರು, ಉದ್ಯಮಿಗಳು, ವ್ಯಾಪಾ ರಸ್ಥರು, ಸಂಘ ಸಂಸ್ಥೆಗಳು ಹಾಗೂ ಮಹಿಳಾ ಸಂಘಟನೆಗಳಿಂದ ಸ್ಥಳೀಯವಾಗಿ ಇರುವ ಸಮಸ್ಯೆ ಗಳನ್ನು ಅಭಿಪ್ರಾಯ ಸಂಗ್ರಹಿಸಿ ಎಲ್ಲವನ್ನೂ ಕ್ರೋಢಿಕರಿಸಿ ಪ್ರಣಾಳಿಕೆ ಕರಡು ಸಿದ್ಧಪಡಿಸಿದೆ.

ಹೀಗಾಗಿ ಅದು ಬೃಹತ್‌ ಗ್ರಂಥದಂತಾಗಿದೆ. ಅಷ್ಟು ದೊಡ್ಡದಾಗಿದ್ದರೆ ಮತದಾರರಿಗೆ ತಲುಪಿಸುವುದು ಕಷ್ಟ, ಮತದಾರರು ಓದಲು ಆಗುವುದಿಲ್ಲ ಎಂದು ಸಮಿತಿ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಣಾಳಿಕೆಯಲ್ಲಿ ನೂರಾರು ಸಣ್ಣಪುಟ್ಟ ಭರವಸೆಗಳನ್ನೂ ಸೇರಿಸಲಾಗಿತ್ತು. ಉದಾಹರ ಣೆಗೆ ರೋಗ ಮುಕ್ತ ಕರ್ನಾಟಕ ಎಂಬ ಯೋಜನೆಯನ್ನು ಜಾರಿಗೊಳಸುವುದಾಗಿ ಪ್ರಣಳಿಕೆಯಲ್ಲಿ ಸೇರಿಸಲಾಗಿತ್ತು ಎನ್ನಲಾಗಿದೆ.

ಈ ಯೋಜನೆಗೆ ಸಮಿ ತಿಯ ಬಹುತೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸಮಾಜವನ್ನು ರೋಗ ಮುಕ್ತಗೊಳಿಸಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ. ಈಡೇರಿಸ ಲಾಗದ ಭರವಸೆಗಳನ್ನು ನೀಡಿದರೆ, ಜನರಿಂದ ತಿರಸ್ಕೃತರಾಗಬೇಕಾತ್ತದೆ ಎಂದು ಸದಸ್ಯರು ಆ ಅಂಶಕ್ಕೆ ವಿರೋಧ ವ್ಯಕ್ತಪಡಿಸಿ ದ್ದಾರೆ ಎಂದು ಹೇಳಲಾಗಿದೆ.

ಈ ಬಾರಿಯ ಪ್ರಣಾಳಿಕೆಯಲ್ಲಿ ಪ್ರಮುಖ ವಾಗಿ ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಯುವಕರಿಗೆ ಉದ್ಯೋಗ ಸೃಷ್ಠಿಸುವ ಅವಕಾಶ ಕಲ್ಪಿಸುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರತಿ ಭರವಸೆಯ ಬಗ್ಗೆಯೂ ಕನಿಷ್ಠ ಹದಿನೈದರಿಂದ ಇಪ್ಪತ್ತು ಪುಟಗಳಷ್ಟು ವಿವರಣೆ ನೀಡಿದ್ದು, ಸಮಿತಿ ಸದಸ್ಯರ ಆಕ್ಷೇಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಅನಗತ್ಯ ಭರವಸೆಗಳನ್ನು ಕೈ ಬಿಟ್ಟು ಸುಮಾರು 200 ಭರವಸೆಗಳನ್ನು ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಚನ್ನಪಟ್ಟಣದಲ್ಲಿ ಜಾರಿಗೊಳಿಸಿರುವ ಕೆರೆ ತುಂಬಿಸುವ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಎಲ್ಲ ಕ್ಷೇತ್ರಗಳ ಲ್ಲಿಯೂ ಕೆರೆ ತುಂಬಿಸುವ ಯೋಜನೆ ಜಾರಿ ಗೊಳಿಸಲು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಪ್ರತ್ಯೇಕ ಪ್ರಣಾಳಿಕೆ: ಮೂರು ಹಂತದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲು ತೀರ್ಮಾನಿಸಿರುವ ಕಾಂಗ್ರೆಸ್‌ ವಿಧಾನಸಭೆ, ಜಿಲ್ಲಾವಾರು ಹಾಗೂ ರಾಜ್ಯ ಮಟ್ಟದ ಪ್ರಣಾಳಿಕೆಯನ್ನು ಪ್ರತ್ಯೇಕವಾಗಿ ಸಿದ್ದಪಡಿಸಿದೆ. ಏಪ್ರಿಲ್‌ 15 ಅಥವಾ 17 ಕ್ಕೆ ಪ್ರಣಾಳಿಕೆಯನ್ನು ಏಕಕಾಲಕ್ಕೆ ಬಿಡುಗಡೆ ಮಾಡಲು ಕಾಂಗ್ರೆಸ್‌ ತೀರ್ಮಾನಿಸಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಸಲಹೆ: ಇದುವರೆಗೂ ಯಾವುದನ್ನು ಜಾರಿಗೊಳಿಸಲು ಸಾಧ್ಯವಾಗಿ ಲ್ಲವೋ, ಕಾಂಗ್ರೆಸ್‌ನಿಂದ ಯಾವ ಯೋಜನೆಯನ್ನು ಕೊಡಲು ಸಾಧ್ಯವಾಗುವುದೋ ಅಂತಹ ಯೋಜನೆಯನ್ನು ಸೇರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಣಾಳಿಕೆ ಸಮಿತಿಗೆ ಸಲಹೆ ನೀಡಿದ್ದರು ಎಂದು ತಿಳಿದು ಬಂದಿದೆ.

* ಶಂಕರ್‌ ಪಾಗೋಜಿ

-ಉದಯವಾಣಿ

Comments are closed.