ರಾಷ್ಟ್ರೀಯ

ಉನ್ನಾವ್‌ ಗ್ಯಾಂಗ್‌ ರೇಪ್‌: BJP ಶಾಸಕನ ಬಂಧನಕ್ಕೆ ಹೈಕೋರ್ಟ್‌ ಆದೇಶ

Pinterest LinkedIn Tumblr


ಅಲಹಾಬಾದ್‌: ಉನ್ನಾವ್‌ ಗ್ಯಾಂಗ್‌ ರೇಪ್‌ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ನನ್ನು ಬಂಧಿಸುವಂತೆ ಅಲಹಾಬಾದ್‌ ಹೈಕೋರ್ಟ್‌ ಸಿಬಿಐಗೆ ಆದೇಶ ನೀಡಿದೆ.

ಶಾಸಕ ಸೆಂಗರ್‌ ಅವರನ್ನು ಪ್ರಶ್ನಿಸಲು ವಶಕ್ಕೆ ತೆಗೆದುಕೊಳ್ಳಲಾಗಿದೆಯೇ ಹೊರತು ಬಂಧಿಸಲಾಗಿಲ್ಲ ಎಂದು ಉತ್ತರ ಪ್ರದೇಶ ಸರಕಾರದ ವಕೀಲರು ಕೋರ್ಟಿನಲ್ಲಿ ಹೇಳಿರುವುದನ್ನು ಅನುಸರಿಸಿ ಮುಖ್ಯ ನ್ಯಾಯಾಧೀಶ ಡಿ ಬಿ ಭೋಸಲೆ ಮತ್ತು ಜಸ್ಟಿಸ್‌ ಸುನೀತ್‌ ಕುಮಾರ್‌ ಅವರನ್ನು ಒಳಗೊಂಡ ಪೀಠವು “ಶಾಸಕ ಸೆಂಗರ್‌ ಅವರನ್ನು ಬಂಧಿಸುವಂತೆ’ ಸಿಬಿಐ ಗೆ ಆದೇಶ ನೀಡಿತು.

ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ಸಿಬಿಐ ಈ ಪ್ರಕರಣದ ತನಿಖೆಯನ್ನು ನಡೆಸಬೇಕು ಮತ್ತು ಈ ಪ್ರಕರಣದಲ್ಲಿ ಜಾಮೀನು ಪಡೆದಿರುವ ಇತರ ಆರೋಪಿಗಳ ಜಾಮೀನನ್ನು ರದ್ದು ಮಾಡಲು ಸಿಬಿಐ ಕೋರ್ಟಿಗೆ ಅರ್ಜಿ ಸಲ್ಲಿಸುವುದನ್ನು ಪರಿಗಣಿಸಬಹುದು ಎಂದು ಕೋರ್ಟ್‌ ಹೇಳಿತು. ಮೇ 2ರೊಳಗೆ ಸಿಬಿಐ ತಾಜಾ ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್‌ ಹೇಳಿತು.

-ಉದಯವಾಣಿ

Comments are closed.