ರಾಷ್ಟ್ರೀಯ

ಭಾರತೀಯರು ಒಳ್ಳೆಯವರು, ಪಾಕಿಗಳು ದುಷ್ಟರು- ಕ್ರಿಮಿನಲ್‌ಗಳು: ದುಬೈ ಪೊಲೀಸ್‌

Pinterest LinkedIn Tumblr


ಹೊಸದಿಲ್ಲಿ: ಭಾರತೀಯರು ಅತ್ಯಂತ ಶಿಸ್ತುಬದ್ಧರು ಹಾಗೂ ಕಾನೂನಿಗೆ ಬದ್ಧರಾಗಿ ಬದುಕುವವರು; ಆದರೆ ಪಾಕಿಸ್ತಾನೀಯರು ‘ದುಷ್ಟರು, ಕಾನೂನುಭಂಜಕರು, ಅಪರಾಧಿಗಳು ಮತ್ತು ಕಳ್ಳಸಾಗಣೆದಾರರು’ ಎಂದು ದುಬೈನ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಸರಣಿ ಟ್ವೀಟ್ ಮಾಡಿದ್ದಾರೆ ಎಂದು ಯುಎಇವೈರಲ್‌.ಕಾಮ್‌ ವರದಿ ಮಾಡಿದೆ.

ದುಬೈನ ಲೆಫ್ಟಿನೆಂಟ್ ಜನರಲ್‌ ಹಾಗೂ ಸಾಮಾನ್ಯ ಭದ್ರತಾ ವಿಭಾಗದ ಮುಖ್ಯಸ್ಥರಾಗಿರುವ ಧಹಿ ಖಲ್ಫಾನ್‌, ಈ ಟ್ವೀಟ್‌ ಮಾಡಿದ್ದಾರೆ. ಮಾದಕ ದ್ರವ್ಯ ಕಳ್ಳಸಾಗಣೆ ಮಾಡುತ್ತಿದ್ದ ಪಾಕಿಸ್ತಾನಿ ಗ್ಯಾಂಗ್‌ ಒಂದನ್ನು ಬಂಧಿಸಿದ ಬಳಿಕ ಅವರು ಈ ಸರಣಿ ಟ್ವೀಟ್‌ಗಳನ್ನು ಪೋಸ್ಟ್‌ ಮಾಡಿದ್ದಾರೆ.

ದುಬೈನ ಈ ಪೊಲೀಸ್‌ ಅಧಿಕಾರಿ 26.6 ಲಕ್ಷ ಹಿಂಬಾಲಕರನ್ನು (ಫಾಲೋವರ್ಸ್‌) ಹೊಂದಿದ್ದು, ಆಗಾಗ್ಗೆ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ ಎಂದು ಪಾಕ್‌ ಪತ್ರಿಕೆಗಳು ಟೀಕಿಸಿವೆ.

ಬಂಧಿತ ಪಾಕಿಗಳ ಚಿತ್ರವನ್ನೂ ಪೋಸ್ಟ್‌ ಮಾಡಿರುವ ಅವರು, ಚಿತ್ರದ ಕೆಳಗೆ ತಮ್ಮ ಹೇಳಿಕೆಯನ್ನು ಅರೆಬಿಕ್‌ ಭಾಷೆಯಲ್ಲಿ ದಾಖಲಿಸಿದ್ದಾರೆ. ಅದನ್ನು ಯುಎಇವೈರಲ್‌.ಕಾಮ್‌ ಇಂಗ್ಲಿಷ್‌ಗೆ ಭಾಷಾಂತರಿಸಿದೆ. ಅದು ಹೀಗಿದೆ: “Pakistanis pose a dangerous threat to gulf societies because of the drugs they bring in to our countries. We must impose strict procedures at the entrances [of our countries].”

ಭಾರತೀಯರು ಹೇಗೆ ಇಷ್ಟೊಂದು ಶಿಸ್ತುಬದ್ಧರು ಮತ್ತು ಪಾಕಿಗಳಿಗೇಕೆ ಶಿಸ್ತಿಲ್ಲ? ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಭಾರತೀಯರು ಶಿಸ್ತುಬದ್ಧ, ಕಾನೂನುಬದ್ಧ ಜೀವನ ನಡೆಸುವವರು. ಆದರೆ ಪಾಕಿಸ್ತಾನಗಳೇಕೆ ದುಷ್ಟರು, ಅಪರಾಧಿಗಳು ಮತ್ತು ಕಳ್ಳಸಾಗಣೆದಾರರಾಗಿದ್ದಾರೆ? ಪಾಕಿಸ್ತಾನ ಸಮಾಜ ಹೀಗೇಕೆ?’ ಎಂದು ಅವರು ಪ್ರಶ್ನಿಸಿದ್ದಾರೆ.

ಪಾಕಿಗಳು ಅಪಾಯಕಾರಿಗಳು, ಯಾರೂ ಕೆಲಸಕ್ಕೆ ಸೇರಿಸಿಕೊಳ್ಳಬೇಡಿ: ದುಬೈನಲ್ಲಿರುವ ಯಾರೂ ಪಾಕಿಸ್ತಾನೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದು ಎಂದೂ ಅವರು ಕರೆ ನೀಡಿದ್ದಾರೆ. ‘ನಮ್ಮ ನಾಗರಿಕರು ಯಾರೂ ಪಾಕಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು. ಪಾಕಿಸ್ತಾನೀಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸುವುದೇ ನಮ್ಮ ರಾಷ್ಟ್ರೀಯ ಕರ್ತವ್ಯವಾಗಿದೆ’ ಎಂದು ದುಬೈ ಅಧಿಕಾರಿ ಟ್ವೀಟ್‌ ಮಾಡಿದ್ದಾರೆ.

‘ಪಾಕಿಸ್ತಾನೀಯರು ಗಲ್ಫ್‌ ರಾಷ್ಟ್ರಗಳಿಗೇ ಅಪಾಯಕಾರಿಗಳು. ನಮ್ಮ ದೇಶಗಳಿಗೆ ಅವರು ಮಾದಕ ದ್ರವ್ಯಗಳನ್ನು ತರುತ್ತಾರೆ. ಪಾಕಿಗಳು ನಮ್ಮ ದೇಶಕ್ಕೆ ನುಸುಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.

Comments are closed.