ರಾಷ್ಟ್ರೀಯ

ಬೆಂಗಳೂರಿನ ಮಲ್ಯ ಸ್ವತ್ತುಗಳ ಜಪ್ತಿಗೆ ಆದೇಶ

Pinterest LinkedIn Tumblr


ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಘೋಷಿತ ಅಪರಾಧಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಸೇರಿದ ಬೆಂಗಳೂರಿನ ಸ್ವತ್ತುಗಳ ಮುಟ್ಟುಗೋಲಿಗೆ ದಿಲ್ಲಿ ನ್ಯಾಯಾಲಯ ಆದೇಶ ಹೊರಡಿಸಿದೆ.

ವಿದೇಶಿ ವಿನಿಮಯ ಕಾಯಿದೆ (ಫೆರಾ) ಉಲ್ಲಂಘಿಸಿ ಹಣ ವರ್ಗ ಮಾಡಿದ ಮಲ್ಯ ವಿರುದ್ಧದ ಕ್ರಮಕ್ಕಾಗಿ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಪ್ರೇಟ್‌ ದೀಪಕ್‌ ಶೆರಾವತ್‌, ಬೆಂಗಳೂರಿನ ಪೊಲೀಸ್‌ ಆಯುಕ್ತರ ಮೂಲಕ ಸ್ವತ್ತುಗಳ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಈ ದಿಸೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಮೇ 8ರ ಒಳಗೆ ವರದಿ ನೀಡುವಂತೆಯೂ ಆದೇಶಿಸಿದರು.

ಸಮನ್ಸ್‌ಗಳಿಗೆ ಸ್ಪಂದಿಸದೇ ತಪ್ಪಿಸಿಕೊಳ್ಳುತ್ತ ಬಂದಿರುವ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಕೋರ್ಟ್‌ ಜನವರಿ 4ರಂದು ಸಾರಿತ್ತು. ಸಾರ್ವಜನಿಕ ಬ್ಯಾಂಕ್‌ಗಳಿಗೆ 9000 ಕೋಟಿ ರೂ. ಪಂಗನಾಮ ಹಾಕಿರುವ ಮದ್ಯದ ವಿಜಯ್‌ ಮಲ್ಯ, ಇಂಗ್ಲೆಂಡ್‌ಗೆ ಪರಾರಿಯಾಗಿದ್ದಾರೆ.

Comments are closed.