ನವದೆಹಲಿ: ಗುಜರಾತ್ ವಿಧಾನಸಭೆಯಲ್ಲಿ ಶಾಸಕರ ನಡುವೆ ನಡೆದ ವಾದ-ವಿವಾದ ತಾರಕಕ್ಕೇರಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಪರಸ್ಪರ ಕೈ-ಕೈ ಮಿಲಾಯಿಸಿರುವ ಘಟನೆ ನಡೆದಿದೆ.
ಕೃಷಿ ಸಚಿವ ಆರ್ .ಸಿ ಫಲ್ಡು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಶಾಸಕರು ಇದಕ್ಕೆ ಅಡ್ಡಿ ಪಡಿಸಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಬಿಜೆಪಿ ಸದಸ್ಯರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಕಾಂಗ್ರೆಸ್ ಶಾಸಕ ಪ್ರತಾಪ್ ದುದತ್ ಬಿಜೆಪಿಯ ಜಗದೀಶ್ ಪಾಂಚಾಲ್ ಗೆ ಹೊಡೆದಿದ್ದಾರೆ.
ನಂತರ ಪಾಂಚಾಲ್ ಏಟಿಗೆ ಏದಿರೇಟು ನೀಡಿದ್ದಾರೆ, ಇಬ್ಬರು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಉಳಿದ ಶಾಸಕರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದರು. ಅಲ್ಲಿಯೂ ಪರಸ್ಪರ ವಾಗ್ಯುದ್ದ ಮುಂದುವರಿಯಿತು. ನಂತರ ಮಾರ್ಷಲ್ ಗಳು ಅವರನ್ನು ಸದನದಿಂದ ಹೊರಗೆ ಹಾಕಿದರು.
ಪ್ರತಾಪ್ ದುದ್ದತ್ ಅವರನ್ನು ಸದ್ಯ ಅಧಿವೇಶನದಿಂದ ಅಮಾನತು ಮಾಡಲಾಗಿದ್ದು ಉಳಿದ ಕಾಂಗ್ರೆಸ್ ಶಾಸಕರು ಬಿಜೆಪಿ ವಿರುದ್ದ ಪ್ರತಿಭಟನೆ ನಡೆಸಿದರು. ಇದೇ ರೀತಿಯ ಘಟನೆ ತೆಲಂಗಾಣ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದಿತ್ತು.