ಹೊಸದಿಲ್ಲಿ: ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ನಾಯಕ ಕೊನ್ರಾಡ್ ಸಂಗ್ಮಾ ಅವರು ಭಾನುವಾರ ಸಂಜೆ ರಾಜ್ಯಪಾಲ ಗಂಗಾ ಪ್ರಸಾದ್ ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿದರು.
ಮಾರ್ಚ್ 6ರಂದು ಪ್ರಮಾಣವಚನ ಸ್ವೀಕಾರ ನಡೆಯುವ ಸಾಧ್ಯತೆಯಿದೆ ಎಂದು ಎಎನ್ಐ ವರದಿ ತಿಳಿಸಿದೆ.
ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾತನಾಡಿದ ಎನ್ಪಿಪಿ ಮುಖಂಡರು, ತಮ್ಮ ಪಕ್ಷದ ಶಾಸಕರು ರಾಜ್ಯದ ಮತ್ತು ಜನತೆಯ ಅಭಿವೃದ್ಧಿಗೆ ಬದ್ಧರಾಗಿದ್ದಾರೆ ಎಂದರು.
‘ಮೈತ್ರಿಕೂಟ ಸರಕಾರವನ್ನು ಮುನ್ನಡೆಸುವುದು ಸುಲಭವಲ್ಲ. ಆದರೆ ನಮ್ಮ ಜತೆಗಿರುವ ಶಾಸಕರು ರಾಜ್ಯ ಮತ್ತು ಜನತೆಯ ಅಭಿವೃದ್ಧಿಗೆ ಸಂಪೂರ್ಣ ಬದ್ಧರು ಎಂಬ ವಿಶ್ವಾಸ ನನಗಿದೆ. ನಮ್ಮ ಎಲ್ಲ ಕಾರ್ಯಗಳೂ ರಾಜ್ಯದ ಅಭಿವೃದ್ಧಿಗೆ ಕೇಂದ್ರಿತವಾಗಿರುತ್ತವೆ’ ಎಂದು ಸಂಗ್ಮಾ ನುಡಿದರು.