ರಾಷ್ಟ್ರೀಯ

ಜ್ಯೋತಿಷ್ಯಕ್ಕೆ ಗುಡ್‌ ಬೈ; ಮದುವೆಗೂ ಮುನ್ನ ರಕ್ತ ಪರೀಕ್ಷೆ!

Pinterest LinkedIn Tumblr


ಪಶ್ಚಿಮ ಬಂಗಾಳ: ಮದುವೆಗೂ ಮುನ್ನ ಜ್ಯೋತಿಷಗಳ ಬಳಿ ತೆರಳಿ ಜಾತಕ, ಕುಂಡಲಿ ಹೊಂದಿಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಸಹಜ. ಆದರೆ ಇವೆಲ್ಲದಕ್ಕೂ ಮಿಗಿಲಾಗಿ ಪಶ್ಚಿಮ ಬಂಗಾಳದಲ್ಲಿ ತಮ್ಮ ಮಗಳ ಮದುವೆಗೆ ರಕ್ತ ಪರೀಕ್ಷೆ ಮಾಡುವ ಮೂಲಕ ವಿಜ್ಞಾನ ಶಿಕ್ಷಕರೊಬ್ಬರು ಮಾದರಿಯಾಗಿದ್ದಾರೆ.

ಸಬಂಗ್ ಹಾಗೂ ಲಕ್ಷ್ಮಣ್ ಚಂದ್ರ ಬೇರಾ ಎಂಬವರೇ ಇತರರಿಗೆ ಮಾದರಿಯಾಗಿದ್ದಾರೆ. ವಧುವರರ ಆರೋಗ್ಯಕರ ಭವಿಷ್ಯ ಹಾಗೂ ಸಂತೋಷದ ಜೀವನ ಮುನ್ನಡೆಸಲು ರಕ್ತ ಪರೀಕ್ಷೆಯನ್ನು ನಡೆಸಲಾಗಿತ್ತು.

ಅಷ್ಟೇ ಯಾಕೆ ಮದುವೆ ಮಂಟಪದಲ್ಲಿ ರಕ್ತ ಪರೀಕ್ಷೆ ಅವಶ್ಯಕತೆ ಬಗ್ಗೆ ಮನವರಿಕೆ ಕ್ಲಾಸ್‌ಗಳನ್ನು ಏರ್ಪಡಿಸಲಾಗಿತ್ತು. ಎಚ್‌ಐವಿ ಸೇರಿದಂತೆ ರಕ್ತದಿಂದ ಉಂಟಾಗುವ ರೋಗಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.

ವಿಜ್ಞಾನಿ ಶಿಕ್ಷಕರ ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳದ ಮುಖ್ಯ ಆರೋಗ್ಯ ಅಧಿಕಾರಿಯಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ರಕ್ತ ಪರೀಕ್ಷೆ ಮಾಡುವ ಅಪ್ಪನ ನಿರ್ಧಾರಕ್ಕೆ ವಧು-ವರರು ಕೂಡಾ ಸಾಥ್ ನೀಡಿದ್ದರು. ಈ ಹಿಂದೆ ಅನೇಕರು ಟೀಕೆ ಮಾಡುತ್ತಿದ್ದರು. ನನ್ನ ನೋಡಿ ಗೇಲಿ ಮಾಡುತ್ತಿದ್ದರು. ಆದರೆ ಅವರೀಗ ಮೌನವಾಗಿದ್ದಾರೆ ಎಂದು ಲಕ್ಷ್ಮಣ್ ಚಂದ್ರ ಬೇರಾ ತಿಳಿಸುತ್ತಾರೆ.

Comments are closed.