ರಾಷ್ಟ್ರೀಯ

ಇಶ್ರತ್‌ ಜಹಾನ್‌: ಸಿಬಿಐ ಕೋರ್ಟಿನಿಂದ ನಾಲ್ವರ ಆರೋಪ ಮುಕ್ತಿ

Pinterest LinkedIn Tumblr


ಅಹ್ಮದಾಬಾದ್‌: 2004ರಲ್ಲಿ ನಡೆದಿದ್ದ ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಕೇಸಿನಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಇಂದು ಬುಧವಾರ ಗುಜರಾತ್‌ ಮಾಜಿ ಪ್ರಭಾರ ಡಿಜಿಪಿ ಪಿಪಿ ಪಾಂಡೆ ಮತ್ತು ಇತರ ಮೂವರನ್ನು ಆರೋಪ ಮುಕ್ತಗೊಳಿಸಿದೆ.

ಇಶ್ರತ್‌ ಜಹಾನ್‌ ಅಪಹರಣ ಮತ್ತು ಕೊಲೆ ಕೇಸಿನಲ್ಲಿ ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿರುವುದರಿಂದ ತಮ್ಮನ್ನು ಆರೋಪ ಮುಕ್ತ ಗೊಳಿಸಬೇಕೆಂದು ಕೋರಿ ಪಾಂಡೆ ಮತ್ತು ಇತರ ಮೂವರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಶೇಷ ಸಿಬಿಐ ಕೋರ್ಟ್‌ ನ್ಯಾಯಾಧೀಶ ಜೆ ಕೆ ಪಂಡ್ಯಾ ಅವರು ಪರಿಗಣಿಸಿ ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಿದರು.

-ಉದಯವಾಣಿ

Comments are closed.