ರಾಷ್ಟ್ರೀಯ

ಕಾರು ಖರೀದಿಸಲು ಪಿಎನ್‌ಬಿಯಿಂದ ₹5000 ಸಾಲ ಪಡೆದಿದ್ದ ಮಾಜಿ ಪ್ರಧಾನಿ ಶಾಸ್ತ್ರಿ ! ಪಿಂಚಣಿ ಹಣದಿಂದ ಮರುಪಾವತಿಸಿದ್ದ ಪತ್ನಿ

Pinterest LinkedIn Tumblr

ನವದೆಹಲಿ: ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹11,344 ಕೋಟಿ ವಂಚನೆ ಮಾಡಿರುವ ಪ್ರಕರಣ ದೇಶದಾದ್ಯಂತ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ, ಮಾಜಿ ಪ್ರಧಾನಿ ಲಾಲ್‌ ಬಹುದ್ದೂರ್‌ ಶಾಸ್ತ್ರಿ ಅವರು ಕಾರು ಖರೀದಿಸಲು ಪಿಎನ್‌ಬಿಯಿಂದ ಮಾಡಿದ್ದ ₹5000 ಸಾಲವನ್ನು ಅವರ ಪತ್ನಿ ಪಿಂಚಣಿ ಹಣದಿಂದ ಮರುಪಾವತಿಸಿದ್ದ ವಿಷಯ ಬಯಲಾಗಿದೆ.

ಶಾಸ್ತ್ರಿ ಅವರು 1964ರಲ್ಲಿ ಫಿಯೆಟ್‌ ಕಾರು ಖರೀದಿಸಲು ಪಿಎನ್‌ಬಿ ಬ್ಯಾಂಕ್‌ನಿಂದ ₹5000 ಸಾಲ ಪಡೆದಿದ್ದರು. ಆದರೆ 1966ರ ಜ.11ರಂದು ಅವರು ಮೃತಪಟ್ಟಿದ್ದರು. ಬಳಿಕ ಸಾಲವನ್ನು ತಿರಿಸುವಂತೆ ಪಿಎನ್‌ಬಿ ಬ್ಯಾಂಕ್‌ ಅಧಿಕಾರಿಗಳು ಶಾಸ್ತ್ರಿ ಕುಂಟುಬಸ್ಥರಿಗೆ ಪತ್ರ ಬರೆದಿದ್ದರು.

ನಂತರ ಶಾಸ್ತ್ರಿ ಅವರ ಪತ್ನಿ ಲಲಿತಾ ಶಾಸ್ತ್ರಿ ತಮ್ಮ ಪಿಂಚಣಿ ಹಣದಲ್ಲಿ ಬ್ಯಾಂಕ್‌ ಸಾಲ ಮರುಪಾವತಿ ಮಾಡಿದ್ದರು ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ.

Comments are closed.