ರಾಷ್ಟ್ರೀಯ

ಅಪ್ಪ ಕುಡಿದು ಅಮ್ಮನಿಗೆ ಹೊಡೆದರೆ ಏನು ಮಾಡಬೇಕು?

Pinterest LinkedIn Tumblr


ಬೆಹ್ರೈಚ್‌: ಉತ್ತರ ಪ್ರದೇಶದ ಬೆಹ್ರೈಚ್‌ನಲ್ಲಿ ಕಟರನಿಯಾಘಾಟ್‌ ವನ್ಯಧಾಮ ಪ್ರದೇಶದ 25 ಗ್ರಾಮಗಳ 250ಕ್ಕು ಹೆಚ್ಚು ಮಕ್ಕಳು ಸೋಮವಾರ ಮಕ್ಕಳ ಹಕ್ಕು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಎಫ್‌ಐಆರ್‌ ದಾಖಲಿಸುವುದು ಹೇಗೆ ಮತ್ತು ಇತರ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ದೆಹಾತ್‌ ಸಾಮಾಜಿಕ ಕಾರ್ಯಕರ್ತರ ಗುಂಪು ಮಕ್ಕಳ ಹಕ್ಕು ರ‍್ಯಾಲಿಯನ್ನು ಹಮ್ಮಿಕೊಂಡಿತ್ತು.

ಇದೇ ವೇಳೆ 10 ವರ್ಷದ ಹೆಣ್ಣು ಮಗು ಗಾಯತ್ರಿ ಕಾನ್ಸ್‌ಟೇಬಲ್‌ಗೆ ಕೇಳಿದ ಪ್ರಶ್ನೆ ಎಲ್ಲರನ್ನು ಚಿಂತಿತರನ್ನಾಗಿಸಿತು. ನನ್ನ ಅಪ್ಪ ಕುಡಿದು ಮನೆ ಬಂದು ಅಮ್ಮನಿಗೆ ಹೊಡೆಯಲು ಆರಂಭಿಸಿದರೆ ಏನು ಮಾಡಬೇಕು? ಎಂದು ಫಕಿರ್‌ಪುರಿಯ ಮಗು ಕೇಳಿದಾಗ ಎಲ್ಲರೂ ನಿಶ್ಯಬ್ದರಾದರು. ಬಳಿಕ ಪೊಲೀಸ್‌ ಅಧಿಕಾರಿ ಹೆಣ್ಣು ಮಗಳನ್ನು ಹತ್ತಿರಕ್ಕೆ ಕರೆದು ಜಾಣತನದಿಂದ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಹೇಳಿ ಕೊಟ್ಟರು. ಎಫ್‌ಐಆರ್‌ ದಾಖಲಿಸುವುದು ಹೇಗೆ ಎಂದು ಹೇಳಿಕೊಟ್ಟರು.

ಅಪರಾಧಕ್ಕೆ ಸಂಬಂಧಿಸಿದ ಇತರ ಐಪಿಸಿ ಸೆಕ್ಷನ್‌ಗಳ ಬಗ್ಗೆ ಮತ್ತು ತುರ್ತು ವಿಭಾಗದ ದೂರವಾಣಿ ಸಂಖ್ಯೆ ಮತ್ತು ಪೊಲೀಸ್‌ ಇಲಾಖೆಯ ರ‍್ಯಾಂಕಿಂಗ್‌ ವಿವರವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.

12 ವರ್ಷದ ಬಾಲಕಿ ಅಂಜಲಿ ಲಂಚದ ಬಗ್ಗೆ ಪೊಲೀಸ್‌ ಅಧಿಕಾರಿ ಜತೆ ಪ್ರಶ್ನಿಸಿದಳು. ಸಿನಿಮಾಗಳಲ್ಲಿ ಲಂಚ ಪಡೆಯುವ ದೃಶ್ಯಗಳನ್ನು ನೋಡಿದ್ದೇನೆ. ಇದನ್ನು ತಡೆಗಟ್ಟುವುದು ಹೇಗೆ ಎಂದು ಪ್ರಶ್ನಿಸಿದಳು. ಇದಕ್ಕೆ ಉತ್ತರಿಸಿದ ಇನ್ಸ್‌ಪೆಕ್ಟರ್‌ ಪರ್ವೇಜ್‌, ಪೊಲೀಸರು ನಿಮ್ಮ ಬೆಂಬಲಕ್ಕೆ ಸದಾ ಸಿದ್ಧರಿರುತ್ತಾರೆ. ಲಂಚ ತೆಗೆದುಕೊಳ್ಳುವುದು ಮತ್ತು ಕೊಡುವುದು ಎರಡೂ ತಪ್ಪು. ಇವುಗಳ ವಿರುದ್ಧ ಪೊಲೀಸ್‌ ಇಲಾಖೆ ಕೆಲಸ ಮಾಡುತ್ತದೆ ಎಂದರು.

ಮಕ್ಕಳು ಪೊಲೀಸ್‌ ಠಾಣೆ ಮತ್ತು ಜೈಲನ್ನು ವೀಕ್ಷಿಸಿದರು. ಸಂಘಸಂಸ್ಥೆಯ ಸದಸ್ಯರಾದ ಗೀತಾ ಪ್ರಸಾದ್‌, ವಿಜಯ್‌ ಯಾದವ್‌, ಮೊಹಮ್ಮದ್‌ ರಾಜಾ ಮತ್ತಿತರರು ಹಾಜರಿದ್ದರು.

Comments are closed.