ರಾಷ್ಟ್ರೀಯ

ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಅಗ್ನಿ-II ಕ್ಷಿಪಣಿ ಪರೀಕ್ಷೆ ಯಶಸ್ವಿ

Pinterest LinkedIn Tumblr


ಬಾಲಸೋರ್​: ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಅಗ್ನಿ-II ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಒಡಿಶಾದ ಅಬ್ದುಲ್​ ಕಲಾಮ್​ ದ್ವೀಪದಲ್ಲಿರುವ ಪರೀಕ್ಷಾ ಕೇಂದ್ರದಿಂದ ಮಂಗಳವಾರ ಬೆಳಗ್ಗೆ 8.38 ಕ್ಕೆ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ಕ್ಷಿಪಣಿ ನಿಗದಿತ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದೆ ಎಂದು ರಕ್ಷಣಾ ಸಚಿವಾಲಯದ ಮೂಲಕ ತಿಳಿಸಿವೆ.

20 ಮೀಟರ್​ ಎತ್ತರವಿರುವ ಕ್ಷಿಪಣಿ 17 ಟನ್​ ತೂಕವಿದೆ. ಈ ಕ್ಷಿಪಣಿ 1 ಸಾವಿರ ಕೆ.ಜಿ. ಸಿಡಿತಲೆಯನ್ನು ಹೊತ್ತು 2000 ಕಿ.ಮೀ. ದೂರದ ಗುರಿಯನ್ನು ಸಮರ್ಥವಾಗಿ ತಲುಪುವ ಸಾಮರ್ಥ್ಯ ಹೊಂದಿದೆ.

ಅಗ್ನಿ-II ಕ್ಷಿಪಣಿಯನ್ನು ಈಗಾಗಲೇ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಇಂದು ತರಬೇತಿಗಾಗಿ ಕ್ಷಿಪಣಿಯನ್ನು ಉಡಾಯಿಸಲಾಯಿತು. ಈ ಕ್ಷಿಪಣಿ ಅತ್ಯಾಧುನಿಕ ನ್ಯಾವಿಗೇಷನ್​ ವ್ಯವಸ್ಥೆ ಹೊಂದಿದೆ ಎಂದು ಡಿಆರ್​ಡಿಒದ ಸಂಶೋಧಕರು ತಿಳಿಸಿದ್ದಾರೆ.

Comments are closed.