ರಾಷ್ಟ್ರೀಯ

ವಿದೇಶ ಪ್ರವಾಸದಲ್ಲಿ ಪ್ರಧಾನಿ ಜತೆ ಯಾರೆಲ್ಲ ಇರ್ತಾರೆ: ಸಿಬಲ್‌

Pinterest LinkedIn Tumblr


ಹೊಸದಿಲ್ಲಿ : ಪಿಎನ್‌ಬಿ ಬಹುಕೋಟಿ ವಂಚನೆ ಹಗರಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಅವರು ಇಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬೆಂಕಿ ಉಗುಳುವ ಭಾಷಣ ಮಾಡಿದರು.

“ಪ್ರಧಾನಿ ಮೋದಿ ಅವರು ಅಧಿಕೃತ ವಿದೇಶ ಪ್ರವಾಸ ಕೈಗೊಳ್ಳುವಾಗ ತಮ್ಮೊಂದಿಗೆ ಯಾರನ್ನೆಲ್ಲ ಕರೆದೊಯ್ಯುತ್ತಾರೆ ಎಂಬುದನ್ನು ಯಾಕೆ ಬಹಿರಂಗಪಡಿಸುವುದಿಲ್ಲ?’ ಎಂದು ಸಿಬಲ್‌ ಪ್ರಶ್ನಿಸಿದರು.

ಪಿಎನ್‌ಬಿ ಬಹುಕೋಟಿ ಹಗರದಲ್ಲಿ ಓರ್ವ ಮುಖ್ಯ ಆರೋಪಿಯಾಗಿರುವ ನೀರವ್‌ ಮೋದಿ ಅವರನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಆರೋಪಿಸಿದ ಸಿಬಲ್‌, “ಪ್ರಧಾನಿಯವರು ಹೇಳುವಂತೆ ಸುಲಿಲಿತ ಉದ್ಯಮ ನಡೆಸುವ ಕ್ರಮ ಹೀಗೆಯಾ?’ ಎಂದು ಪ್ರಶ್ನಿಸಿದರು.

ದಾವೋಸ್‌ನಲ್ಲಿ ಈಚೆಗೆ ನಡೆದ ವಿಶ್ವ ಆರ್ಥಿಕ ಶೃಂಗಕ್ಕೆ ಹೋದ ಮೋದಿ ನಿಯೋಗದಲ್ಲಿ ನೀರವ್‌ ಮೋದಿ ಕೂಡ ಇದ್ದರು ಎಂದು ಕಾಂಗ್ರೆಸ್‌ ಈ ಮೊದಲು ಆಪಾದಿಸಿತ್ತು. ಬಿಜೆಪಿ ಈ ಆರೋಪಗಳನ್ನೆಲ್ಲ ಅಲ್ಲಗಳೆದು ಪ್ರಧಾನಿ ಮೋದಿ ಅವರು ನೀರವ್‌ ಮೋದಿ ಅವರೊಂದಿಗೆ ಯಾವುದೇ ಖಾಸಗಿ ಭೇಟಿ ಮಾತುಕತೆ ನಡೆಸಿಲ್ಲ ಎಂದು ಹೇಳಿದೆ.

-ಉದಯವಾಣಿ

Comments are closed.