ರಾಷ್ಟ್ರೀಯ

ಭಾರತವನ್ನು ಮುಕೇಶ್‌ ಅಂಬಾನಿ 20 ದಿನ ನಿರ್ವಹಿಸಬಲ್ಲರು!

Pinterest LinkedIn Tumblr


ಹೊಸದಿಲ್ಲಿ: ಭಾರತದ ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ ಎಷ್ಟು ಶ್ರೀಮಂತರೆಂದರೆ, ಅವರ ಒಟ್ಟು ಸಂಪತ್ತನ್ನು ಬಳಸಿ ಭಾರತ ಸರಕಾರದ 20 ದಿನಗಳ ವೆಚ್ಚವನ್ನು ನಿರ್ವಹಿಸಬಹುದಾಗಿದೆ. ಮುಕೇಶ್‌ 2.58 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತನ್ನು ಹೊಂದಿದ್ದು, ಇಷ್ಟು ಹಣ ಬಳಸಿ 20 ದಿನ ದೇಶವನ್ನು ನಿರ್ವಹಿಸಬಹುದಾಗಿದೆ.

ಅಂಬಾನಿ ಸೇರಿದಂತೆ ವಿಶ್ವದ ಸಿರಿವಂತರು ಮತ್ತು ಅವರ ಸಂಪತ್ತನ್ನು ಲೆಕ್ಕ ಹಾಕಿ, ಯಾರು ಯಾವ ದೇಶವನ್ನು ಎಷ್ಟು ದಿನ ನಿರ್ವಹಿಸಬಲ್ಲರು ಎನ್ನುವ ಪಟ್ಟಿಯನ್ನು ಬ್ಲೂಮ್‌ಬರ್ಗ್‌ ಸಿದ್ಧಪಡಿಸಿದೆ. 2018 ರಾಬಿನ್‌ಹುಡ್‌ ಇಂಡೆಕ್ಸ್‌ ಅನ್ನು ತಯಾರಿಸಲಾಗಿದ್ದು, 49 ದೇಶಗಳು ಮತ್ತು 49 ಸಿರಿವಂತರನ್ನು ಗುರ್ತಿಸಲಾಗಿದೆ. ಈ 49 ಸಿರಿವಂತರಲ್ಲಿ ಕೇವಲ ನಾಲ್ವರಷ್ಟೇ ಮಹಿಳೆಯರಿದ್ದಾರೆ. ಅಂಗೋಲಾ, ಆಸ್ಪ್ರೇಲಿಯಾ, ಚಿಲಿ, ನೆದರ್‌ಲೆಂಡ್‌ ದೇಶಗಳನ್ನು ಈ ‘ಲಕ್ಷ್ಮಿ ಪುತ್ರಿ’ಯರು ಪ್ರತಿನಿಧಿಸಿದ್ದಾರೆ.

ದೇಶದ ಒಟ್ಟು ಸಂಪತ್ತು, ವ್ಯಕ್ತಿಯ ಸಂಪತ್ತು, ಸರಕಾರದ ವೆಚ್ಚ ಮತ್ತಿತರ ಅಂಶಗಳನ್ನು ಸೂಚ್ಯಂಕದಲ್ಲಿ ಹೋಲಿಕೆ ಮಾಡಲಾಗಿದೆ. ಸೈಪ್ರಸ್‌ ದೇಶದ ಜಾನ್‌ ಫ್ರೆಡ್‌ರಿಕ್ಸೆನ್‌ ಅವರು 441 ದಿನ ಸರಕಾರವನ್ನು ನಿಭಾಯಿಸುವ ಶಕ್ತಿಯನ್ನು ಹೊಂದಿದ್ದಾರೆ. ಇದೊಂದು ಕಡಿಮೆ ಜನಸಂಖ್ಯೆಯ ದೇಶವಾಗಿದೆ. ಜಪಾನ್‌, ಪೋಲೆಂಡ್‌, ಅಮೆರಿಕ ಮತ್ತು ಚೀನಾ ದೇಶಗಳ ನಿರ್ವಹಣೆಗೆ ಹೆಚ್ಚಿನ ಹಣ ಅಗತ್ಯವಿದೆ. ವಿಶ್ವದ 16ನೇ ದೊಡ್ಡ ಸಿರಿವಂತ ಜಾಕ್‌ ಮಾ 47 ಶತಕೋಟಿ ಡಾಲರ್‌ ಸಂಪತ್ತು ಹೊಂದಿದ್ದು, ಚೀನಾ ದೇಶವನ್ನು 4 ದಿವಸ ನಡೆಸಬಲ್ಲರು.

Comments are closed.