ರಾಷ್ಟ್ರೀಯ

ಡಿಎಲ್‌ಗೆ ಆಧಾರ್‌ ಲಿಂಕ್‌: ಸುಪ್ರೀಂಗೆ ಮಾಹಿತಿ

Pinterest LinkedIn Tumblr


ಹೊಸದಿಲ್ಲಿ: ನಕಲಿ ಡ್ರೈವಿಂಗ್‌ ಲೈಸನ್ಸ್‌ಗಳ ಹಾವಳಿ ತಡೆಯಲು ವಾಹನ ಬಳಕೆದಾರರ ಆಧಾರ್‌ ಸಂಖ್ಯೆಯನ್ನು ಇನ್ಮುಂದೆ ಅವರ ಚಾಲನಾ ಪರವಾನಗಿ ಜತೆ ಬೆಸೆಯಲಾಗುವುದು. ಈ ಪ್ರಕ್ರಿಯೆ ಸರಳೀಕರಣಗೊಳಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರವು ಸಾರಥಿ-4 ವಿಶೇಷ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಬುಧವಾರ ಮಾಹಿತಿ ನೀಡಿದೆ.

ರಸ್ತೆ ಸುರಕ್ಷತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ.ಎಸ್‌.ರಾಧಾಕೃಷ್ಣನ್‌ ಅವರ ನೇತೃತ್ವದ ಸಮಿತಿಯು, ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್‌ ಹಾಗೂ ದೀಪಕ್‌ ಗುಪ್ತಾ ನೇತೃತ್ವದ ನ್ಯಾಯಪೀಠಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ಈ ಮಾಹಿತಿಯನ್ನು ಸ್ಪಷ್ಟಪಡಿಸಿದೆ. ಸಾರಥಿ-4 ಸಾಫ್ಟ್‌ವೇರ್‌ ಮೂಲಕ ಎಲ್ಲ ರಾಜ್ಯಗಳ ಸಾರಿಗೆ ಇಲಾಖೆಗಳನ್ನು ಬೆಸೆದು, ವಾಹನ ಚಾಲನಾ ಪರವಾನಗಿಗಳಿಗೆ ಆಧಾರ್‌ ಸಂಖ್ಯೆ ನಮೂದಿಸಲಾಗುವುದು. ಈ ವ್ಯವಸ್ಥೆಯ ಮೂಲಕ ನಕಲಿ ಡಿಎಲ್‌ಗಳ ಹಾವಳಿಗೆ ತಡೆ ಬೀಳಲಿದೆ ಎಂದು ವರದಿ ಹೇಳಿದೆ.

ಆಧಾರ್‌ ಸಿಂಧುತ್ವದ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆ ನಡೆದಿದೆ.

Comments are closed.