ರಾಷ್ಟ್ರೀಯ

ಮೋದಿ ಭೇಟಿ: ಕಳಸಾ ಬಂಡೂರಿ ಹೋರಾಟಗಾರರ ಬಂಧನ

Pinterest LinkedIn Tumblr


ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಮುತ್ತಿಗೆ ಹಾಕಲು ಹೋಗಲು ಯತ್ನಿಸಿದ್ದ ನೂರಾರು ಮಹದಾಯಿ , ಕಳಸಾ ಬಂಡೂರಿ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈತ ಹೋರಾಟಗಾರ ಲೋಕನಾಥ್ ಹೆಬಸೂರು ಸೇರಿದಂತೆ ನೂರಾರು ರೈತರು ಸರಕಾರಿ ಬಸ್‌ನಲ್ಲಿ ಧಾರವಾಡ ಜಿಲ್ಲೆಯ ನವಲಗುಂದಿದಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಹೆಬಸೂರು ಬಳಿ ಪೊಲೀಸರು ರೈತರನ್ನು ಬಂಧಿಸಿದ್ದಾರೆ.

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅರಮನೆ ಮೈದಾನದಲ್ಲಿ ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ ಮಹದಾಯಿ ವಿಚಾರವಾಗಿ ರೈತರು ಶನಿವಾರದಂದು ಹುಬ್ಬಳ್ಳಿಗೆ ತೆರಳಿ ಬಳಿಕ ಬೆಂಗಳೂರಿಗೆ ಹೋಗುವ ಯೋಜನೆ ರೂಪಿಸಿದ್ದರು.

Comments are closed.