ರಾಷ್ಟ್ರೀಯ

ಪುರುಷರು ಚಡ್ಡಿ ಧರಿಸಿ ಆಡುವ ಫುಟ್ಬಾಲ್‌ ಅನ್ನು ಮುಸ್ಲಿಮ್‌ ಮಹಿಳೆಯರು ವೀಕ್ಷಿಸುವುದು ಇಸ್ಲಾಮ್‌ಗೆ ವಿರೋಧ: ದಾರುಲ್‌ ಉಲುಮ್

Pinterest LinkedIn Tumblr


ಲಖನೌ: ಮುಸ್ಲಿಮ್‌ ಮಹಿಳೆಯರು ಯಾವುದೇ ಕಾರಣಕ್ಕೂ ಫುಟ್ಬಾಲ್‌ ವೀಕ್ಷಿಸಬಾರದು. ಇದು ಇಸ್ಲಾಮ್‌ ಧರ್ಮಕ್ಕೆ ವಿರುದ್ಧವಾಗಿದೆ. ಇನ್ಮುಂದೆ ಮುಸ್ಲಿಮ್‌ ಮಹಿಳೆಯರು ಪುರುಷರ ಚಡ್ಡಿ ಧರಿಸಿ ಆಡುವ ಫುಟ್ಬಾಲ್‌ ವೀಕ್ಷಣೆ ಮಾಡಬಾರದು ಎಂದು ದಾರುಲ್‌ ಉಲುಮ್‌ ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ.

ಮೊಣಕಾಲುಗಳನ್ನು ತೋರಿಸಿಕೊಂಡು ಫುಟ್ಬಾಲ್‌ ಆಡುವುದನ್ನು ಮುಸ್ಲಿಮ್‌ ಮಹಿಳೆಯರು ನೋಡಬಾರದು ಎಂದು ಫತ್ವಾ ಹೊರಡಿಸಿರುವವರು ಮೌಲ್ವಿ ಮುಫ್ತಿ ಆಥಾರ್‌ ಕಸ್ಮಿ.

ದಿಯೋಬಂದ್‌ನಲ್ಲಿರುವ ಸುನ್ನಿ ಮುಸ್ಲಿಮ್‌ ಸಮುದಾಯದ ಮೌಲ್ವಿಯಾಗಿರುವ ಕಸ್ಮಿ, ಈ ಹಿಂದೆಯೂ ಹಲವಾರು ಬಾರಿ ಫತ್ವಾಗಳನ್ನು ಹೊರಡಿಸಿದ್ದರು.

ನಿಮಗೆ ನಾಚಿಕೆಯಾಗುವುದಿಲ್ಲವೇ? ಅಲ್ಲಾಹ್‌ ಎಂದರೆ ಭಯವಿಲ್ಲವೇ? ಈ ರೀತಿಯ ಆಟಗಳನ್ನು ಯಾವುದೇ ಕಾರಣಕ್ಕೂ ನೋಡಬೇಡಿ ಎಂದು ಪ್ರಾರ್ಥನಾ ಸಂದರ್ಭವೊಂದರಲ್ಲಿ ಕಸ್ಮಿ ತಿಳಿಸಿದ್ದಾರೆ.

ಆದರೆ ಸುನ್ನಿ ಸಮುದಾಯ ಹೆಚ್ಚಿರುವ ಸೌದಿ ಅರೇಬಿಯಾದಲ್ಲೇ ಮಹಿಳೆಯರು ಫುಟ್ಬಾಲ್‌ ವೀಕ್ಷಿಸಲು ಅವಕಾಶವಿದೆ. ಆದರೆ ಈ ಮೌಲ್ವಿ ಭಾರತದಲ್ಲಿ ಮುಸ್ಲಿಮ್‌ ಮಹಿಳೆಯರಿಗೆ ಫತ್ವಾ ಹೊರಡಿಸಿದ್ದಾರೆ.

ಫುಟ್ಬಾಲ್‌ ವೀಕ್ಷಣೆ ಮಾಡುವುದಿರಂದ ಏನು ಲಾಭ; ಫುಟ್ಬಾಲ್‌ ಆಟಗಾರರ ತೊಡೆಗಳನ್ನು ನೋಡುವುದರಿಂದ ನಿಮಗೇನೂ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ ಕಸ್ಮಿ.

ಈ ಹಿಂದೆ ಮುಸ್ಲಿಮ್‌ ಮಹಿಳೆಯರು ಬ್ಯೂಟಿ ಪಾರ್ಲರ್‌ಗಳಿಗೆ ಹೋಗಬಾರದು, ಬಿಗಿಯಾದ ಉಡುಪುಗಳನ್ನು ಧರಿಸಬಾರದು ಎಂದು ಫತ್ವಾ ಹೊರಡಿಸಲಾಗಿತ್ತು.

ಉತ್ತರ ಪ್ರದೇಶದ ದಿಯೋಬಂದ್‌ನಲ್ಲಿರುವ ದಾರುಲ್‌ ಉಲುಮ್‌ಗೆ 150 ವರ್ಷಗಳ ಇತಿಹಾಸವಿದೆ.

ಕಸ್ಮಿ ನೀಡಿರುವ ಫತ್ವಾಗೆ ಈಗಾಗಲೇ ಹಲವಾರು ಮುಸ್ಲಿಮ್‌ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ.

Comments are closed.