ರಾಷ್ಟ್ರೀಯ

ಜ.29ರಿಂದ ಸಂಸತ್ ಬಜೆಟ್ ಅಧಿವೇಶನ: ಮಸೂದೆ, ವಿಷಯಗಳ ಬಗ್ಗೆ ಸರ್ಕಾರ, ವಿಪಕ್ಷಗಳ ಚರ್ಚೆ

Pinterest LinkedIn Tumblr


ನವದೆಹಲಿ: ಜ.29 ರಿಂದ ಸಂಸತ್ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ಮಸೂದೆ, ವಿಷಯಗಳ ಬಗ್ಗೆ ಸರ್ಕಾರ, ವಿಪಕ್ಷಗಳು ಚರ್ಚೆ ನಡೆಸಿವೆ. ಬಜೆಟ್ ಅಧಿವೇಶನದಲ್ಲಿ ಸರ್ಕಾರ ತ್ರಿವಳಿ ತಲಾಖ್ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವ ಗುರಿ ಹೊಂದಿದೆ.

ಇದೇ ವೇಳೆ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಗೂ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವುದು ಸರ್ಕಾರದ ಉದ್ದೇಶವಾಗಿದೆ. ಕೇಂದ್ರ ಸರ್ಕಾರ ಸಹಕರಿಸುವ ಮನಸ್ಥಿತಿಯನ್ನು ಅಳವಡಿಸಿಕೊಂಡು ಪ್ರತಿಪಕ್ಷಗಳು ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಹೇಳಿದ್ದಾರೆ.

Comments are closed.