ರಾಷ್ಟ್ರೀಯ

ಕರ್ನಾಟಕದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಗೋವಾ ಸಚಿವ

Pinterest LinkedIn Tumblr


ಪಣಜಿ: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾದ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಕರ್ನಾಟಕದ ವಿರುದ್ಧ ಪುನಃ ಠೀಕಾ ಪ್ರಹಾರ ನಡೆಸಿದ್ದು, ‘ನ್ಯಾಯಾಧೀಕರಣದಲ್ಲಿ ತಮಗೆ ತೊಂದರೆಯುಂಟಾಗಲಿದೆ ಎಂದು ತಿಳಿದು ಕರ್ನಾಟಕ ತಾನೇ ಕಟ್ಟಿದ ಕಳಸಾ ಬಂಡೂರಿ ನಾಲೆಯ ತಡೆಗೋಡೆ ಒಡೆದುಹಾಕಿದೆ’ ಎಂದು ಆರೋಪಿಸಿದ್ದಾರೆ.

ಮಹದಾಯಿ ಹೋರಾಟದಲ್ಲಿ ಗೋವಾ ಪರಿಸರ ವಾದಿಗಳ ಹೋರಾಟ ಯೋಗ್ಯ ರೀತಿಯಲ್ಲಿ ಸಾಗುತ್ತಿದ್ದು, ಸರಕಾರ ನೇಮಕ ಮಾಡಿರುವ ವಿಶೇಷ ಸಮಿತಿ ಕೂಡಾ ಕಳಸಾ ಬಂಡೂರಿ ನಾಲೆ ಪರಿಶೀಲನೆ ನಡೆಸುತ್ತಿದೆ ಎಂದರು.

ಮಹದಾಯಿ ನದಿ ನೀರನ್ನು ಉಳಿಸಿಕೊಳ್ಳಲು ಗೋವಾ ನಡೆಸಿರುವ ಹೋರಾಟವನ್ನು ಅರಿತಿರುವ ಕರ್ನಾಟಕ, ನ್ಯಾಯಾಕರಣದಲ್ಲಿ ತನ್ನ ಪಾಲಿಗೆ ಈ ವಿಷಯವೇ ಮುಳುವಾಗಲಿದೆ ಎಂದು ತಡೆಗೋಡೆ ಒಡೆದುಹಾಕಿದೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿಯೂ ಮಹದಾಯಿ ವಿಷಯದಲ್ಲಿ ಕರ್ನಾಟಕದ ಎಲ್ಲ ಪ್ರಯತ್ನವನ್ನೂ ವಿಫಲಗೊಳಿಸಲಾಗುವುದು. ಮಹದಾಯಿ ನದಿ ನೀರನ್ನು ತಡೆಹಿಡಿದು ತಿರುಗಿಸಿಕೊಳ್ಳಲು ಕರ್ನಾಟಕ ನಡೆಸಿರುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ವಿನೋದ್ ಪಾಲೇಕರ್ ಅಭಿಪ್ರಾಯಪಟ್ಟರು.

Comments are closed.