ರಾಷ್ಟ್ರೀಯ

ಹೆಲಿಕಾಪ್ಟರ್ ಪತನ: ನಾಲ್ವರ ಮೃತದೇಹ ಪತ್ತೆ

Pinterest LinkedIn Tumblr

ಮುಂಬೈ: ಪವನ್ ಹಾನ್ಸ್ ಹೆಲಿಕಾಪ್ಟರ್ ಶನಿವಾರ ಬೆಳಗ್ಗೆ ಇಲ್ಲಿನ ಜುಹು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಕಣ್ಮರೆಯಾಗಿದ್ದು, ಮುಂಬೈ ತೀರದಲ್ಲಿ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ಅವಶೇಷ ಪತ್ತೆಯಾಗಿದ್ದು, ನಾಲ್ವರ ಮೃತದೇಹ ಸಿಕ್ಕಿದೆ.

ಹೆಲಿಕಾಪ್ಟರ್ ನಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಅಧಿಕಾರಿಗಳು(ಒಎನ್ ಜಿಸಿ) ಸೇರಿದಂತೆ ಕನಿಷ್ಠ 5 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಾಫಿನ್ ಚಾಪರ್, ವಿಟಿ ಪಿಡಬ್ಲ್ಯುಎ ಇಂದು ಬೆಳಗ್ಗೆ 10.20ಕ್ಕೆ ಜುಹು ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಯಿತು. ನಂತರ ಕೇವಲ 15 ನಿಮಿಷಗಳಲ್ಲಿಯೇ ಮುಂಬೈಯ ಎಟಿಸಿ ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮಗಳಿಂದ ಸಂಪರ್ಕ ಕಳೆದುಕೊಂಡಿತು.

ಮುಂಬೈ ತೀರಪ್ರದೇಶದಿಂದ ಒಎನ್ ಜಿಸಿ ಮುಂಬೈ ಹೈ ತೈಲ ನಿಕ್ಷೇಪ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ 55 ಕಿಲೋ ಮೀಟರ್ ದೂರದಲ್ಲಿ 175 ಕಿಲೋ ಮೀಟರ್ ವಾಯುವ್ಯ ದಿಕ್ಕಿನಲ್ಲಿ ಹಾರಾಟ ಮಾಡುತ್ತಿದೆ ಎಂದು ಭಾವಿಸಲಾಗಿತ್ತು.

Comments are closed.