ರಾಷ್ಟ್ರೀಯ

ಸೇನಾ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಬೇಡಿ: ಗೀಲಾನಿ

Pinterest LinkedIn Tumblr


ಶ್ರೀನಗರ: ಜಮ್ಮು ಮತ್ತು ಕಾಶ್ಮೀರವು ಭಾರತದಿಂದ ಪ್ರತ್ಯೇಕಗೊಳ್ಳಬೇಕು ಎಂದು ಹೋರಾಡುತ್ತಲೇ ಬಂದಿರುವ ಹುರಿಯತ್ ಕಾನ್ಫರೆನ್ಸ್‌ನ ನಾಯಕ ಸಯ್ಯದ್ ಅಲಿ ಶಾ ಗೀಲಾನಿ ಸೇನಾ ಶಾಲೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಶ್ಮೀರದಲ್ಲಿನ ಮುಸ್ಲಿಮರು ತಮ್ಮ ಮಕ್ಕಳನ್ನು ಸೇನಾ ಶಾಲೆಗೆ ಕಳುಹಿಸಬೇಡಿ ಎಂದು ಕರೆಕೊಟ್ಟಿದ್ದಾರೆ.

ಸೇನಾ ಶಿಕ್ಷಣ ಸಂಸ್ಥೆಗಳು, ಮುಸ್ಲಿಂ ಸಂಸ್ಕೃತಿ ಸಂಪ್ರದಾಯಕ್ಕೆ ವಿರುದ್ಧವಾಗಿ ಶಿಕ್ಷಣವನ್ನು ಬೋಧಿಸುತ್ತಿವೆ ಎಂದು ಗೀಲಾನಿ ಆರೋಪಿಸಿದ್ದಾರೆ. ಮುಸ್ಲಿಮರು ಯಾರೂ ತಮ್ಮ ಮಕ್ಕಳನ್ನು ಸೇನಾ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಬೇಡಿ ಎಂದಿದ್ದಾರೆ.

ಸೇನಾ ಶಿಕ್ಷಣ ಸಂಸ್ಥೆಗಳಲ್ಲಿ ಓದಿಕೊಂಡರೆ, ನಿಮ್ಮ ಮಕ್ಕಳು ಸಂಪೂರ್ಣವಾಗಿ ಬದಲಾಗುತ್ತಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ ಪ್ರತ್ಯೇಕ ಸಂಸ್ಕೃತಿ, ಜೀವನ ವಿಧಾನ, ಸಂಪ್ರದಾಯಗಳು ಇರುವ ಇಸ್ಲಾಂನಿಂದ ಮಕ್ಕಳು ದೂರ ಸರಿಯುವ ಅವಕಾಶ ಇದೆ. ಸೇನಾ ಶಿಕ್ಷಣ ಸಂಸ್ಥೆಗಳಿಗಿಂತ ಉತ್ತಮ ಗುಣಮಟ್ಟದ ಸರಕಾರಿ, ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳನ್ನು ಸೇರಿಸಬೇಕೆಂದು ಅವರು ಪೋಷಕರಿಗೆ ಸೂಚಿಸಿದ್ದಾರೆ.

Comments are closed.