ರಾಷ್ಟ್ರೀಯ

ತ್ರಿವಳಿ ತಲಾಖ್‌ ಉಲ್ಲಂಘಿಸಿದರೆ 3 ವರ್ಷ ಜೈಲು; ಮಸೂದೆ ಶೀಘ್ರ ಜಾರಿ

Pinterest LinkedIn Tumblr

ಹೊಸದಿಲ್ಲಿ: ತ್ರಿವಳಿ ತಲಾಖ್‌ ಅನ್ನು ತಾತ್ಕಾಲಿಕವಾಗಿ ಸುಪ್ರೀಂಕೋರ್ಟ್‌ ನಿಷೇಧಿಸಿದ ಬೆನ್ನಲ್ಲೇ ಕೇಂದ್ರ ಸರಕಾರ ಈ ಪದ್ಧತಿಯನ್ನು ಕಾನೂನಾತ್ಮಕವಾಗಿ ತೆಗೆದು ಹಾಕಲು ತ್ರಿವಳಿ ತಲಾಖ್‌ ಕರಡು ಮಸೂದೆಯನ್ನು ಸಿದ್ಧಪಡಿಸಿದೆ.

ಕೇಂದ್ರ ಸಿದ್ಧಪಡಿಸಿರುವ ತ್ರಿವಳಿ ತಲಾಖ್ ಕರಡು ಮಸೂದೆಯಲ್ಲಿ ತಲಾಖ್ ನೀಡುವ ಪುರುಷರಿಗೆ ದಂಡ, ಮೂರು ವರ್ಷ ಜೈಲು ಶಿಕ್ಷೆ ಹಾಗೂ ಮಹಿಳೆಯರಿಗೆ ಪರಿಹಾರ ನೀಡಲು ಅವಕಾಶವಿದೆ. ಒಂದು ಬಾರಿ ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ಯಾವುದೇ ಕಾನೂನಿನ ಮೇಲೆ ರಾಜ್ಯ ಸರಕಾರಗಳ ಒಪ್ಪಿಗೆ ಪಡೆಯುವ ಅಗತ್ಯ ಕೇಂದ್ರಕ್ಕಿಲ್ಲವಾದರೂ ಇಂತಹ ಸೂಕ್ಷ್ಮ ವಿಚಾರದಲ್ಲಿ ರಾಜ್ಯಗಳ ಅಭಿಪ್ರಾಯವನ್ನು ಪಡೆದಿರುವ ಕೇಂದ್ರವು ಸಿದ್ಧಪಡಿಸಿರುವ ಮಸೂದೆಯನ್ನು ಶುಕ್ರವಾರದಂದು ಎಲ್ಲಾ ರಾಜ್ಯಗಳಿಗೂ ಕಳುಹಿಸಿಕೊಡಲು ನಿರ್ಧರಿಸಿದೆ.

ಗೃಹ ಸಚಿವ ರಾಜನಾಥ್‌ ಸಿಂಗ್ ನೇತೃತ್ವದಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಕಾರ್ಯದರ್ಶಿ ಪಿ.ಪಿ. ಚೌದರಿಯನ್ನೊಳಗೊಂಡ ಸಮಿತಿ ಈ ಕರಡು ಮಸೂದೆಯನ್ನು ಸಿದ್ಧಪಡಿಸಿದೆ.

ಕಳೆದ ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್‌ ಅನ್ನು ಆರು ತಿಂಗಳ ಕಾಲ ನಿಷೇಧಿಸಿತ್ತು. ಈ ಸಂಬಂಧ ಶಾಸನ ಜಾರಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿತ್ತು. ತಲಾಖ್‌ ನಿಷೇಧ ಹೊಂದಿದ ಬಳಿಕವೂ ಸರಕಾರಕ್ಕೆ 67 ತಲಾಖ್‌ ಪ್ರಕರಣಗಳು ಬಂದಿದ್ದವು. 2017ವೊಂದರಲ್ಲೇ 177ಕ್ಕೂ ಅಧಿಕ ತಲಾಖ್‌ಗೆ ಸಂಬಂಧಿಸಿದ ದೂರುಗಳು ಬಂದಿದ್ದವು.

Comments are closed.