ರಾಷ್ಟ್ರೀಯ

ಪಂಜಾಬ್‌ ಪೊಲೀಸ್‌ ಠಾಣೆಗಳಲ್ಲಿ ರಾಶಿ ಬಿದ್ದಿವೆ 30,000 ವಾಹನಗಳು

Pinterest LinkedIn Tumblr


ಚಂಡೀಗಢ: ಪಂಜಾಬ್‌ ನ ಪೊಲೀಸ್‌ ಠಾಣೆಗಳಲ್ಲಿ 30,000ಕ್ಕೂ ಅಧಿಕ ಮೋಟಾರು ವಾಹನಗಳು ರಾಶಿ ಬಿದ್ದಿವೆ; ಇವುಗಳಲ್ಲಿ ಚುತುಷ್‌ ಚಕ್ರ ವಾಹನಗಳ ಸಂಖ್ಯೆಯೇ 10,791 ಆಗಿದೆ.

ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಅವರು ಇಂದು ಮಂಗಳವಾರ ಈ ವಿಷಯವನ್ನು ಸದನಕ್ಕೆ ತಿಳಿಸಿದರು.

ಕಾಂಗ್ರೆಸ್‌ ಶಾಸಕ ಗುರು ಕೀರತ್‌ ಸಿಂಗ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಿಎಂ, ರಾಜ್ಯದ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ಆಸ್ತಿಯಾಗಿ 30,000 ಮೋಟಾರು ವಾಹನಗಳು ರಾಶಿ ಬಿದ್ದಿವೆ; ಇವುಗಳಲ್ಲಿ 21,134 ದ್ವಿಚಕ್ರ ವಾಹನಗಳು, 10,791 ಚತುಷcಕ್ರ ವಾಹನಗಳಾಗಿವೆ ಎಂದು ಹೇಳಿದರು.

-ಉದಯವಾಣಿ

Comments are closed.