ರಾಷ್ಟ್ರೀಯ

2 ಕೋಟಿ ಕೊಡಿ; ಗುಜರಾತ್‌ ಸಿಎಂ ಸೆಕ್ಸ್‌ ವಿಡಿಯೋ ಕೊಡ್ತೀನಿ: ಹಾರ್ದಿಕ್‌ ಪಟೇಲ್‌

Pinterest LinkedIn Tumblr

ಹೊಸದಿಲ್ಲಿ : “ನನಗೆ ನೀವು ಎರಡು ಕೋಟಿ ರೂ. ಕೊಡಿ; ನಾನು ನಿಮಗೆ ಗುಜರಾತ್‌ ಸಿಎಂ ವಿಜಯ್‌ ರೂಪಾಣಿ ಅವರ ಮುಖವನ್ನು ಕಾಣಿಸುವ ಸೆಕ್ಸ್‌ ಸಿಡಿಯನ್ನು ಕೊಡಿಸುತ್ತೇನೆ’ ಎಂದು ಪಾಟಿದಾರ್‌ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌ ಹೇಳಿದ್ದಾರೆ.

ಝೀ ನ್ಯೂಸ್‌ ನ “ಗೇಮ್‌ ಆಫ್ ಗುಜರಾತ್‌ ಕಾನ್‌ಕ್ಲೇವ್‌’ ನಲ್ಲಿ ಹಾರ್ದಿಕ್‌ ಮಾತನಾಡುತ್ತಿದ್ದರು.

ತನ್ನ ಕುರಿತಾಗಿ ಈಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ವೈರಲ್‌ ಆಗಿದ್ದ ಸೆಕ್ಸ್‌ ಸಿಡಿಯ ಬಗ್ಗೆ ಹಾರ್ದಿಕ್‌ ಮನಬಿಚ್ಚಿ ಹೇಳಿದ್ದು ಹೀಗೆ :

ಗುಜರಾತ್‌ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಾಗ ಬಿಜೆಪಿ ಜನರ ಮನಸ್ಸನ್ನು ಮುಖ್ಯ ವಿಷಯಗಳಿಂದ ಬೇರೆಡೆಗೆ ಹರಿಸಲು ಮಾಡಿರುವ ತಂತ್ರವೇ ನನ್ನ ಕುರಿತಾದ ಸೆಕ್ಸ್‌ ಸಿಡಿ. ನನಗೆ ಇದರಿಂದ ತುಂಬಾ ಆಘಾತವಾಗಿದೆ. ಮಾನಸಿಕವಾಗಿ ನನ್ನನ್ನು ಕುಗ್ಗಿಸುವ ಯತ್ನ ಇದಾಗಿದೆ.

ಸಿಡಿಯಲ್ಲಿರುವುದು ನಾನೇ ಅಥವಾ ತಿರುಚಲ್ಪಟ್ಟ ನನ್ನ ಚಿತ್ರವೇ ಎಂಬುದೆಲ್ಲ ಅನಗತ್ಯ ಪ್ರಶ್ನೆ. ಗುಜರಾತ್‌ ಜನರಿಗೆ ಬೇಕಿರುವ ರಾಜ್ಯದ ನೈಜ ಸ್ಥಿತಿಗತಿ ತೋರಿಸುವ ಸಿಡಿಯೇ ಹೊರತು 22 ವರ್ಷ ಪ್ರಾಯದ ಹುಡುಗನ ಬೆಡ್‌ ರೂಮ್‌ ದೃಶ್ಯದ ಸಿಡಿ ಅಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸವಿದೆ.

ಸೆಕ್ಸ್‌ ಸಿಡಿಯ ಪ್ರಶ್ನೆಗಳನ್ನು ಕೇಳುವುದು ಅದನ್ನು ಉತ್ತರಿಸುವುದು ತೀರ ಕ್ಷುಲ್ಲಕ ಕೆಲಸ. ಸೆಕ್ಸ್‌ ಸಿಡಿಯಲ್ಲಿರುವುದು ನಾನೇ ಇರಲಿ ಅಥವಾ ಬೇರೆ ಯಾರೇ ಇರಲಿ; ಜನರಿಗೆ ಅದನ್ನು ತಿಳಿದು ಆಗಬೇಕಾದ್ದು ಏನೂ ಇಲ್ಲ.

ನನ್ನ ಕುರಿತಾದ ಸೆಕ್ಸ್‌ ಸಿಡಿ ಬಿಜೆಪಿಯ ಅನೈತಿಕ ತಂತ್ರ. ಬಿಜೆಪಿಗೆ ಈ ಚಾಳಿ ಇರುವುದರಿಂದ ನಾನಿನ್ನು ತುಂಬ ಜಾಗೃತೆಯಲ್ಲಿ ಇರಬೇಕಾಗಿದೆ. ಮನೆಯಲ್ಲಿ ಸ್ನಾನ ಮಾಡುವಾಗ ಮರೆಯದೇ ಕಿಟಿಕಿ ಬಾಗಿಲುಗಳನ್ನು ಮುಚ್ಚಿಕೊಳ್ಳಬೇಕಾಗಿದೆ.

Comments are closed.