ರಾಷ್ಟ್ರೀಯ

ಪತ್ನಿ ಜತೆ ವಾಸಿಸಲು ಆದೇಶಿಸಲಾಗದು; ಸುಪ್ರೀಂಕೋರ್ಟ್‌

Pinterest LinkedIn Tumblr


ನವದೆಹಲಿ: ಮಹತ್ವದ ತೀರ್ಪೊಂದರಲ್ಲಿ ಸುಪ್ರೀಂಕೋರ್ಟ್‌, ಪತ್ನಿಗೆ ಆಶ್ರಯ ಕೊಡಲೇಬೇಕೆಂದು ವಿಚ್ಛೇದಿತ ಪತಿಗೆ ಯಾವುದೇ ನ್ಯಾಯಾಲಯಗಳು ಆದೇಶಿಸುವಂತಿಲ್ಲ ಎಂದು ಹೇಳಿದೆ. ವೃತ್ತಿಯಲ್ಲಿ ಪೈಲಟ್‌ ಆಗಿರುವ ತಮಿಳುನಾಡಿನ ವ್ಯಕ್ತಿಯೊಬ್ಬರ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ.

ವಿಚ್ಛೇದನ ನೀಡಿದ್ದ ಆ ವ್ಯಕ್ತಿಯು ಆನಂತರ ಪತ್ನಿಯೊಂದಿಗೆ ಮೌಖೀಕ ಒಪ್ಪಂದಕ್ಕೆ ಮುಂದಾಗಿ ಅದರಂತೆ ತನ್ನ ಪತ್ನಿ, ಪುತ್ರನನ್ನು ತಾನು ಕೆಲಸ ಮಾಡುವ ಊರಿಗೆ ಕರೆದೊಯ್ಯುವುದಾಗಿ ತಿಳಿಸಿದ್ದ. ಆದರೆ, ಇದನ್ನು ಪಾಲಿಸದಿದ್ದ ಆತನ ವಿರುದ್ಧ ಪತ್ನಿ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠಕ್ಕೆ ಮೊರೆ ಹೋಗಿದ್ದಳು.

ಆಗ, ನ್ಯಾಯಪೀಠವು, ಪತ್ನಿಯನ್ನು ಆತ ಕರೆದೊಯ್ಯಲೇಬೇಕೆಂದು ಸೂಚಿಸಿತ್ತು. ಆದರೆ, ಇದನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್‌, ಮಾನವೀಯ ಸಂಬಂಧಗಳನ್ನು ಬಲವಂತವಾಗಿ ಹೆಣೆಯಲು ಸಾಧ್ಯವಿಲ್ಲ ಎಂದಿದೆಯಲ್ಲದೆ, ಪತ್ನಿ, ಪುತ್ರರ ಜೀವನಾಂಶಕ್ಕಾಗಿ 10 ಲಕ್ಷ ರೂ. ನೀಡಬೇಕೆಂದು ಸೂಚಿಸಿ, ಆತನ ಜಾಮೀನಿಗೂ ಹಸಿರು ನಿಶಾನೆ ತೋರಿದೆ.

-ಉದಯವಾಣಿ

Comments are closed.