ರಾಷ್ಟ್ರೀಯ

ಚಿತ್ತೋಡ್‌ಗಢ ಕೋಟೆಯಲ್ಲಿರುವ ಪದ್ಮಾವತಿ ಕುರಿತ ಮಾಹಿತಿ ಫಲಕ ಮುಚ್ಚಿದ ಇಲಾಖೆ

Pinterest LinkedIn Tumblr


ಜೈಪುರ: ಪದ್ಮಾವತಿ ಚಿತ್ರದ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಚಿತ್ರ ಬಿಡುಗಡೆಗೆ ಮಾತ್ರವಲ್ಲ ಈಗ ಪದ್ಮಾವತಿಗೆ ಸಂಬಂಧಪಟ್ಟ ವಸ್ತುಗಳು, ಜಾಗಗಳನ್ನು ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ರಾಜಸ್ಥಾನದ ಚಿತ್ತೋಡ್‌ಗಢದ ಕೋಟೆಯಲ್ಲಿರುವ ಪದ್ಮಾವತಿ ಕುರಿತ ಮಾಹಿತಿ ಫಲಕವನ್ನು ಈಗ ಭಾರತೀಯ ಪುರಾತತ್ವ ಇಲಾಖೆ ರಕ್ಷಿಸಲು ಮುಂದಾಗಿದೆ.

ಪದ್ಮಾವತಿಯನ್ನು ಮೊದಲ ಬಾರಿಗೆ ಮೊಘಲ್‌ ದೊರೆ ಅಲ್ಲಾವುದ್ದೀನ್‌ ಖಿಲ್ಜಿ ಇದೇ ಜಾಗದಲ್ಲಿ ನೋಡಿದ್ದ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಿಸಲಾಗಿದೆ.

ಈ ಮಾಹಿತಿಯನ್ನು ಇಲ್ಲಿರುವ ಫಲಕದ ಮೇಲೆ ಕೆತ್ತಲಾಗಿದೆ. ಈ ಮಾಹಿತಿಯ ಫಲಕವನ್ನು ಇಲ್ಲಿಂದ ತೆಗೆದು ಹಾಕಬೇಕು. ಇಲ್ಲದಿದ್ದರೆ ಅದನ್ನು ನಾಶಪಡಿಸುತ್ತೇವೆ ಎಂದು ಶ್ರೀ ರಜಪೂತ ಕರ್ಣಿ ಸೇನಾ ಬೆದರಿಕೆ ಹಾಕಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಪುರಾತತ್ವ ಇಲಾಖೆ ಈ ಮಾಹಿತಿಯನ್ನು ಬಟ್ಟೆಯಿಂದ ಮುಚ್ಚಿದೆ.

ಕೋಟೆಯ ಈ ಭಾಗದಿಂದಲೇ ಪದ್ಮಾವತಿಯನ್ನು ಖಿಲ್ಜಿ ನೋಡಿದ್ದ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.

ಪದ್ಮಾವತಿ ಚಿತ್ರ ಚಿತ್ರೀಕರಣ ನಡೆಯುತ್ತಿದ್ದಾಗಿನಿಂದಲೂ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕೋಟೆಯ ಕೆಲವೊಂದು ಭಾಗಗಳನ್ನು ಪ್ರವಾಸಿಗರ ವೀಕ್ಷಣೆಗೆ ನಿಷೇಧಿಸಲಾಗಿದೆ.

Comments are closed.