ರಾಷ್ಟ್ರೀಯ

ಇನ್ನು ಮುಂದೆ ಶಬರಿಮಲೆಯಲ್ಲಿ ವಿಶೇಷ ದರ್ಶನವಿಲ್ಲ: ದೇವಸ್ಥಾನ ಮಂಡಳಿ

Pinterest LinkedIn Tumblr


ತಿರುವನಂತಪುರ: ಶಬರಿಮಲೆಯ ಅನ್ನದಾನ ನಿಧಿಗೆ 1000 ರೂಪಾಯಿಗಿಂತ ಹೆಚ್ಚು ಹಣ ದಾನ ನೀಡಿದವರಿಗೆ ವಿಶೇಷ ದರ್ಶನ ವ್ಯವಸ್ಥೆಯನ್ನು ತೆಗೆದುಹಾಕಲು ತಿರುವಾಂಕೂರು ದೇವಸ್ಥಾನ ಮಂಡಳಿ ನಿರ್ಧರಿಸಿದೆ.

ಮಂಡಳಿಯ ನಿರ್ಧಾರವನ್ನು ದೇವಸ್ಥಾನದ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್, ಈ ಹಿಂದೆ ವಿಶೇಷ ದರ್ಶನ ನೀಡುವ ವ್ಯವಸ್ಥೆಯನ್ನು ಉತ್ತಮ ಉದ್ದೇಶಕ್ಕೆ ಆರಂಭಿಸಲಾಗಿತ್ತು. ಆದರೆ ಭಕ್ತರು ನಂತರ ಬೇಸರ ವ್ಯಕ್ತಪಡಿಸಿದ್ದರಿಂದ ಇನ್ನು ಮುಂದೆ ಆ ಸೌಲಭ್ಯವನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಭಕ್ತರು ಶಬರಿಮಲೆಯ ಅನ್ನದಾನ ನಿಧಿಗೆ ಹಣ ನೀಡುವವರು ಕೌಂಟರ್ ನಲ್ಲಿ ಕಟ್ಟಬೇಕು. ಆದರೆ ಅದಕ್ಕೆ ವಿಶೇಷ ದರ್ಶನ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದ ಪದ್ಮಕುಮಾರ್ ಅವರು, ದೇವಸ್ಥಾನದ ಹಣಕಾಸು ಸ್ಥಿತಿ ಬಗ್ಗೆ ಪ್ರಾಥಮಿಕ ಅಧ್ಯಯನ ನಡೆಸಿದ್ದು, ಯಾವುದೇ ಹಣಕಾಸಿನ ಬಿಕ್ಕಟ್ಟು ಇಲ್ಲ. ಹಣಕಾಸಿನ ಬಿಕ್ಕಟ್ಟು ಇದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.

ಇದೇ ಭಕ್ತರಿಗೆ ಸೂಕ್ತ ಭದ್ರತೆ ಒದಗಿಸುವುದಕ್ಕಾಗಿ ರಾಜ್ಯ ಪೊಲೀಸರು ಮತ್ತು ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗಿದೆ. ಸುಮಾರು 1,500 ರಾಜ್ಯ ಪೊಲೀಸರು ಶಬರಿ ಮಲೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Comments are closed.