ರಾಷ್ಟ್ರೀಯ

ಸುಖೋಯ್‌ ಯುದ್ಧವಿಮಾನದ ಮೂಲಕ ಬ್ರಹ್ಮೋಸ್‌ ಕ್ಷಿ‍‍ಪಣಿ ಯಶಸ್ವಿ ಉಡಾವಣೆ

Pinterest LinkedIn Tumblr

ನವದೆಹಲಿ: ಅತ್ಯಾಧುನಿಕ ಸೂಪರ್‌ಸಾನಿಕ್ (ಶಬ್ದಾತೀತ) ಬ್ರಹ್ಮೋಸ್‌ ಕ್ಷಿಪಣಿಯನ್ನು ಇದೇ ಮೊದಲ ಬಾರಿ ಭಾರತೀಯ ವಾಯುಪಡೆಯ ಯುದ್ಧವಿಮಾನ ಸುಖೋಯ್‌–30ಎಂಕೆಐ ಮೂಲಕ ಉಡಾವಣೆ ಮಾಡಲಾಗಿದೆ.

ಬುಧವಾರ ನಡೆಸಲಾದ ಪರೀಕ್ಷಾರ್ಥ ಉಡಾವಣೆಯಲ್ಲಿ ಬಂಗಾಳ ಕೊಲ್ಲಿಯಲ್ಲಿ ನಿಗದಿ ಪಡಿಸಿದ್ದ ಗುರಿಯತ್ತ ಬಹ್ಮೋಸ್‌ ಕ್ಷಿಪಣಿ ಯಶಸ್ವಿಯಾಗಿ ನುಗ್ಗಿತು. ಈ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

ಸುಖೋಯ್‌–30ಎಂಕೆಐ ಮೂಲಕ 2.5 ಟನ್‌ ತೂಕದ ಬ್ರಹ್ಮೋಸ್‌ ಕ್ಷಿಪಣಿ (Air Launched Cruise Missile –ALCM) ಉಡಾವಣೆ ಯಶಸ್ವಿಯಾಗಿರುವುದು ವಾಯುಪಡೆ ಸಾಮರ್ಥ್ಯ ಹೆಚ್ಚಿಸಿದಂತಾಗಿದೆ ಎಂದು ರಕ್ಷಣಾ ಸಚಿವಾಲಯ ಪ್ರತಿಕ್ರಿಯಿಸಿದೆ.

ಕ್ಷಿಪಣಿ ಹೊತ್ತೊಯ್ಯಲು ಸಹಕಾರಿಯಾಗುವಂತೆ ಎಚ್‌ಎಎಲ್‌ ಸುಖೋಯ್‌–30ಎಂಕೆಐ ಯುದ್ಧವಿಮಾನದಲ್ಲಿ ಕೆಲ ಮಾರ್ಪಾಡು ಮಾಡಿತ್ತು. ಗಂಟೆಗೆ 3,400–3,700 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್‌ ಜಗತ್ತಿನ ಅತಿ ವೇಗದ ಕ್ಷಿಪಣಿಯಾಗಿದೆ.

ಭಾರತದ ಡಿಆರ್‌ಡಿಒ ಹಾಗೂ ರಷ್ಯಾದ ಎನ್‌ಪಿಒಎಂ ಜತೆಗೂಡಿ ಈ ಕ್ಷಿಪಣಿ ಅಭಿವೃದ್ಧಿಗೊಳಿಸಿವೆ. ನೆಲ, ಜಲ ಹಾಗೂ ವಾಯು ಮಾರ್ಗದಿಂದ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ ಮಾಡಬಹುದಾಗಿದೆ.

Comments are closed.