ರಾಷ್ಟ್ರೀಯ

ಯುವತಿಗೆ ನಗ್ನ ಚಿತ್ರ ಕಳುಹಿಸಿದ್ರೆ ಜಾಬ್ ಗ್ಯಾರೆಂಟಿ ಎಂದ ಸಂದರ್ಶಕ

Pinterest LinkedIn Tumblr


ಹೈದ್ರಾಬಾದ್: ಉದ್ಯೋಗ ಬೇಕಾದಲ್ಲಿ ನಗ್ನ ಚಿತ್ರಗಳನ್ನು ಕಳುಹಿಸಿ ಎಂದು ಯುವತಿಯೊಬ್ಬಳನ್ನು ಒತ್ತಾಯಿಸಿದ 32 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಂಜಿನಿಯರಿಂಗ್ ಪದವೀಧರೆಯಾದ ಮಹಿಳೆಯ ದೂರಿನ ಮೇರೆಗೆ ಪೊಲೀಸ್ ಅಧಿಕಾರಿಗಳು ಆರೋಪಿ ಬಿ.ನರೇಂದ್ರ ಸಿಂಗ್‌ನನ್ನು ಬಂಧಿಸಿ ವಿಟಾರಣೆ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಸ್ವಾತಿ ಲಾಕ್ರಾ ತಿಳಿಸಿದ್ದಾರೆ.

ಐಟಿ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹಾಜರಾಗಿದ್ದ ಯುವತಿಯೊಬ್ಬಳು ವಾಟ್ಸಪ್ ಮೂಲಕ ನರೇಂದ್ರ ಸಿಂಗ್‌ನನ್ನು ಸಂಪರ್ಕಿಸಿ, ತಮ್ಮ ಸಂದರ್ಶನದ ಕಥೆ ಏನಾಯಿತು ಎಂದು ಕೇಳಿದ್ದಾರೆ. ಅದಕ್ಕೆ ನರೇಂದ ಸಿಂಗ್ ನಿನ್ನ ನಗ್ನ ಫೋಟೋಗಳನ್ನು ಕಳುಹಿಸಿದಲ್ಲಿ ಉದ್ಯೋಗ ದೊರೆಯುತ್ತದೆ ಎನ್ನುವ ಸಂದೇಶ ರವಾನಿಸಿದ್ದಾನೆ,

ನಂತರ ಯುವತಿ ಹಲವಾರು ಬಾರಿ ಕರೆ ಮಾಡಿದಾಗಲೂ ನಿನ್ನ ಹಾಟ್ ಚಿತ್ರಗಳನ್ನು ಕಳುಹಿಸದಿದ್ದಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಆರೋಪಿ ನರೇಂದ್ರ ಸಿಂಗ್ ಖಡಾಖಂಡಿತವಾಗಿ ಹೇಳಿದ್ದಾನೆ. ಯುವತಿ ತನ್ನ ಚಿತ್ರಗಳನ್ನು ಕಳುಹಿಸದೆ ಪೊಲೀಸರಿಗೆ ದೂರು ನೀಡಿದ್ದಾಳೆ,

ಪ್ರತಿಷ್ಠಿತ ಐಟಿ ಕಂಪೆನಿಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ನರೇಂದ್ರ ಸಿಂಗ್, ಯುವತಿಗೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಕೊಡಿಸುತ್ತೇನೆ. ಆದರೆ, ನಿನ್ನ ನಗ್ನ ಫೋಟೋ ಕಳುಹಿಸಿಕೊಡು ಎಂದು ಕೋರಿದ್ದಾನೆ. ಆದರೆ, ಯುವತಿ ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಐಟಿ ಕಾಯ್ದೆಯನ್ವಯ ಆರೋಪಿ ನರೇಂದ್ರ ಸಿಂಗ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ವಾತಿ ಲಾಕ್ರಾ ತಿಳಿಸಿದ್ದಾರೆ.

Comments are closed.