ರಾಷ್ಟ್ರೀಯ

ಮೋದಿ ಬೆಂಗಾವಲು ವಾಹನ ಮೇಲೆ ಬಳೆ ಎಸೆದವಳೀಗ ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರಯತ್ನ

Pinterest LinkedIn Tumblr


ವಡೋದರ: ಕಳೆದ ತಿಂಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್‌ ಪ್ರವಾಸ ಕೈಗೊಂಡಾಗ ಅವರ ಬೆಂಗಾವಲು ವಾಹನದ ಮೇಲೆ ಬಳೆಗಳನ್ನು ಎಸೆದಿದ್ದ ಮಹಿಳೆಯೊಬ್ಬರು ಈಗ ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

ಆಶಾ ಕಾರ್ಯಕರ್ತರಿಗಾಗಿ ಗುತ್ತಿಗೆ ಮತ್ತು ನಿಗದಿತ ವೇತನಕ್ಕಾಗಿ ಹೋರಾಟ ಸಮಿತಿ ರಚಿಸಿ ಹೋರಾಟ ನಡೆಸಿದ್ದ ಚಂದ್ರಿಕಾ ಈಗ ಕಾಂಗ್ರೆಸ್‌ ಟಿಕೆಟ್‌ಗಾಗಿ ಹರ ಸಾಹಸ ಪಡುತ್ತಿದ್ದಾರೆ.

ಕಳೆದ ತಿಂಗಳು ಮೋದಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ರೋಡ್‌ ಶೋ ನಡೆಸುತ್ತಿದ್ದಾಗ ಬೆಂಗಾವಲು ವಾಹನಗಳ ಮೇಲೆ ಬಳೆಗಳನ್ನು ಎಸೆದು ಚಂದ್ರಿಕಾ ಸುದ್ದಿಯಾಗಿದ್ದರು. ನಂತರ ಚಂದ್ರಿಕಾ ಹಾಗೂ ರಜನಿಕಾಂತ್‌ ಸೋಲಂಕಿ ಅವರನ್ನು ಪೊಲೀಸರು ಬಂಧಿಸಿದ್ದರು.

ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಚಂದ್ರಿಕಾ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.

ಚಂದ್ರಿಕಾ ಈ ಮೊದಲು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿತ್ತು. ಆಗಿನಿಂದ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದರು.

ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿರುವ ಚಂದ್ರಿಕಾ ಟಿಕೆಟ್‌ಗಾಗಿ ಮನವಿ ಮಾಡಿದ್ದಾರೆ.

Comments are closed.