ಅಂತರಾಷ್ಟ್ರೀಯ

ಮುಂದಿನ ವರ್ಷ ಪ್ರಳಯ: ವಿಜ್ಞಾನಿಗಳ ಭವಿಷ್ಯವಾಣಿ

Pinterest LinkedIn Tumblr


ಹೊಸದಿಲ್ಲಿ: ಮುಂದಿನ ವರ್ಷ ಭಾರಿ ಭೂಕಂಪ ಸಂಭವಿಸಲಿದ್ದು, ಜಗತ್ತು ಸರ್ವನಾಶವಾಗಲಿದೆ ಎಂದು ಅಮೆರಿಕದ ಇಬ್ಬರು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.

ವಿಜ್ಞಾನಿಗಳಾದ ಕೊಲರಾರ‍ಯಡೊ ವಿಶ್ವವಿದ್ಯಾಲಯದ ರೋಜರ್‌ ಬಿಲ್ಹಾಂ ಹಾಗೂ ಮೊಂಟಾನಾ ವಿಶ್ವವಿದ್ಯಾಲಯದ ರೆಬೆಕಾ ಬೆಂಡಿಕ್‌ ದ್ವಯರು ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿ ನಡೆದ ‘ಭೂವೈಜ್ಞಾನಿಕ ಸೊಸೈಟಿಯ ವಾರ್ಷಿಕ ಸಭೆ’ಯಲ್ಲಿ ಈ ಆತಂಕದ ಬಾಂಬ್‌ ಸಿಡಿಸಿದ್ದಾರೆ.

20ನೇ ಶತಮಾನದ ಆರಂಭದಿಂದ ಸಂಭವಿಸಿದ 7 ಅಥವಾ ಅದಕ್ಕಿಂತ ಹೆಚ್ಚು ತೀವ್ರತೆಯ ಎಲ್ಲಾ ಭೂಕಂಪಗಳ ಬಗ್ಗೆ ನಡೆಸಿದ ಅಧ್ಯಯನಗಳ ಆಧಾರದಲ್ಲಿ ಅವರು ಈ ಭವಿಷ್ಯ ನುಡಿದಿದ್ದಾರಂತೆ. ಅವರ ಪ್ರಕಾರ, 2018ರಲ್ಲಿ 20ಕ್ಕೂ ಹೆಚ್ಚು ಭಾರಿ ಭೂಕಂಪಗಳು ಸಂಭವಿಸಲಿದೆಯಂತೆ.

Comments are closed.