ರಾಷ್ಟ್ರೀಯ

ತಾಯಿ ಟಿವಿ ನೋಡಬೇಡ ಅಂದಿದ್ದಕ್ಕೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಬಾಲಕಿ

Pinterest LinkedIn Tumblr


ಬರಾಸಾತ್(ಕೋಲ್ಕತ್ತಾ): ತಾಯಿ ಟಿವಿ ನೋಡಿದ್ದು ಸಾಕು ಪರೀಕ್ಷೆಗೆ ಓದು ಅಂತ ಹೇಳಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಬರಾಕ್ಪೋರ್ ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿ ಸ್ವೇತಿ ಸಿಂಗ್ ಆತ್ಮಹತ್ಯೆಗೆ ಶರಣಾಗಿರುವ ಮೃತ ದುರ್ದೈವಿ. ನವೆಂಬರ್ ಕೊನೆಯಲ್ಲಿ ಪರೀಕ್ಷೆಗಳಿಗೆ ದಿನಾಂಕ ನಿಗದಿಯಾಗಿತ್ತು. ಹೀಗಾಗಿ ಪೋಷಕರು ಟಿವಿ ನೋಡಿದ್ದು ಸಾಕು ಪರೀಕ್ಷೆಗೆ ಓದು ಎಂದು ಹೇಳಿದ್ದರು.

ಈ ವೇಳೆ ಮನೆಯಿಂದ ಹೊರ ಬಂದ ಸ್ವೇತಿ ಸಿಂಗ್ ತನ್ನ ಸ್ನೇಹಿತರ ಮನೆಗೆ ಹೋಗುವುದಾಗಿ ಹೇಳಿದ್ದಳು. ಆದರೆ ಸ್ನೇಹಿತರ ಮನೆಗೆ ಹೋಗದೆ ಮನೆಯ ಪಕ್ಕದಲ್ಲೇ ಇದ್ದ ಹೋಗ್ಲಿ ಕರೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸ್ವೇತಿ ಸಿಂಗ್ ಕೆರೆಗೆ ಹಾರಿದಾಗ ಅಲ್ಲೇ ಪಕ್ಕದಲ್ಲಿದ್ದ ಸ್ಥಳೀಯರು ಕೆರೆಗೆ ಹಾರಿ ಬಾಲಕಿಯ ಜೀವ ಉಳಿಸಲು ಪ್ರಯತ್ನಿಸಿದರು. ಆದರೆ ಕೆರೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದಿದ್ದರಿಂದ ಬಾಲಕಿಯನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ.

ನವೆಂಬರ್ 15ರಂದು 16 ವರ್ಷದ ಬಾಲಕಿಯೊಬ್ಬಳು ತಂದೆ ಸ್ಮಾರ್ಟ್ ಫೋನ್ ತೆಗೆದುಕೊಡಲು ನಿರಾಕರಿಸಿದ್ದಾರೆ ಎಂದು ನೊಂದು ಇದೇ ಹೂಗ್ಲಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.