ರಾಷ್ಟ್ರೀಯ

ತಂದೆಗೇ ಪುನರ್ಜನ್ಮ ನೀಡಿದ ಪುತ್ರಿ ! ಈಕೆ ಮಾಡಿದ್ದು ಅಂತಿಂಥ ಕೆಲಸವಲ್ಲ…

Pinterest LinkedIn Tumblr

ನವದೆಹಲಿ: ಪೂಜಾ ಬಿಜಾರ್ನಿಯಾ ಎಂಬ ಯುವತಿ ಪಿತ್ತಕೋಶ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಂದೆಗೆ ತನ್ನ ಪಿತ್ತಕೋಶ ದಾನ ಮಾಡಿ ತಂದೆಗೆ ಮರುಜೀವ ನೀಡಿದ್ದಾಳೆ. ಯುವತಿಯ ಈ ಧೈರ್ಯವನ್ನು ವೈದ್ಯರೊಬ್ಬರು ಫೇಸ್ ಬುಕ್ ಫೋಟೋ ಹಾಕಿ ಪುಟ್ಟದಾದ ವರದಿಯೊಂದನ್ನು ಹಾಕಿದ್ದು ಇದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ, ಪೂಜಾ ಬಿಜಾರ್ನಿಯಾ ಎಂಬ ಯುವತಿ ಪಿತ್ತಕೋಶ ವೈಫ‌ಲ್ಯದಿಂದ ಬಳಲುತ್ತಿದ್ದ ತನ್ನ ತಂದೆಗೆ ತನ್ನ ಪಿತ್ತಕೋಶ ದಾನ ಮಾಡಿ ಅವರನ್ನು ಬದುಕಿಸಿ ಕೊಂಡಿದ್ದಳು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿ ಕೊಂಡ ಅಪ್ಪ- ಮಗಳ ಫೋಟೋದೊಂದಿಗೆ ಈ ಸುದ್ದಿ ವೈರಲ್‌ ಆಗಿತ್ತು.

ಇದೀಗ, ಡಾ. ರಚಿತ್‌ ಭೂಷಣ್‌ ಶ್ರೀವಾಸ್ತವ ಎಂಬ ವೈದ್ಯರೊಬ್ಬರು ಈ ಫೋಟೋ ಉಪಯೋಗಿಸಿ ಮನಮುಟ್ಟುವ ಅಡಿಬರಹ ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ನಿಜ ಜೀವನಗಳಲ್ಲಿ ಹೀರೋಗಳನ್ನು ತುಂಬಾ ಅಪರೂಪವಾಗಿ ನೋಡುತ್ತೇವೆ. ಪಿತ್ತಕೋಶ ದಾನ ಮಾಡಿ ತಂದೆಯನ್ನು ಉಳಿಸಿಕೊಂಡ ಈ ಯುವತಿಯು, ಹೆಣ್ಣೆಂದರೆ ಅಸಡ್ಡೆ ತೋರುವ ಅದೆಷ್ಟೋ ಹೆತ್ತವರಿಗೆ, ಹೆಣ್ಣು ಏನು ತಾನೇ ಮಾಡಿಯಾಳು ಎಂದು ಪ್ರಶ್ನಿಸುವ ವ್ಯಕ್ತಿಗಳಿಗೆ ಉತ್ತರ ನೀಡಿದ್ದಾಳೆ. ಈಕೆ ವೈಯಕ್ತಿಕವಾಗಿ ಪರಿಚಯವಿಲ್ಲದಿದ್ದರೂ, ಈಕೆಗೆ ನಾನು ಅಭಿನಂದನೆ ಅರ್ಪಿಸುತ್ತೇನೆ. ದೇವರು ಆಕೆಗೆ ಒಳ್ಳೆಯದನ್ನು ಮಾಡಲಿ” ಎಂದಿದ್ದಾರೆ.

Comments are closed.