ರಾಷ್ಟ್ರೀಯ

ರಾಂಚಿ: ಮುಸ್ಲಿಂ ಯೋಗ ಶಿಕ್ಷಕಿ ಮನೆಯ ಮೇಲೆ ಕಲ್ಲು ತೂರಾಟ

Pinterest LinkedIn Tumblr

ರಾಂಚಿ: ಬೆದರಿಕೆ ಎದುರಿಸುತ್ತಿದ್ದ ಮುಸ್ಲಿಂ ಯೋಗ ಶಿಕ್ಷಕಿ ಮನೆಯ ಮೇಲೆ ಅನಾಮಿಕ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಯೋಗ ಶಿಕ್ಷಕಿಯಾಗಿದ್ದ ಜಾರ್ಖಂಡ್ ನ ರಾಫಿಯಾ ನಾಜ್ ಗೆ ತನ್ನದೇ ಸಮುದಾಯದಿಂದ ಬೆದರಿಕೆಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಜಾರ್ಖಂಡ್ ಪೊಲೀಸರು ಭದ್ರತೆಯನ್ನೂ ಒದಗಿಸಿದ್ದರು. ಭದ್ರತೆಯ ಹೊರತಾಗಿಯೂ ರಾಫಿಯಾ ನಾಜ್ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ.

ಯೋಗ ಕಲಿಸುತ್ತಿರುವುದಕ್ಕೆ ಮುಸ್ಲಿಂ ಧಾರ್ಮಿಕ ಮುಖಂಡರು ಫತ್ವಾ ಹೊರಡಿಸಿರುವುದರ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಯೋಗ ತರಬೇತಿ ಬಿಡುವಂತೆ ಹಾಗೂ ಹೆಸರನ್ನು ಬದಲಿಸುವಂತೆ ಮತ್ತು ದುಪ್ಪಟ್ಟ ಹೊದ್ದಿಕೊಳ್ಳುವಂತೆ ಆಕೆಗೆ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಆಕೆ ಪೊಲೀಸರಿಗೆ ದೂರು ನೀಡಿದ್ದರು. ಹಿಂದೂ ಮತ್ತು ಮಸ್ಲಿಂ ಎರಡು ಸಮುದಾಯದವರಿಂದ ಪದೇ ಪದೇ ಬೆದರಿಕೆ ಕರೆ ಬರುತ್ತಿವೆ. ನನ್ನ ಹೆಸರನ್ನು ಬದಲಾಯಿಸುವಂತೆ ಹಾಗೂ ಯೋಗ ಹೇಳಿಕೊಡುವಾಗ ದುಪ್ಪಟ್ಟ ಹಾಕಿ ಕೊಳ್ಳುವಂತೆ ಕರೆ ಮಾಡಿ ಬೆದರಿಸಲಾಗುತ್ತಿದೆ ಎಂದು ರಾಫಿಯಾ ಆರೋಪಿಸಿದ್ದಾರೆ.

ಇದೇ ವೇಳೆ ಯೋಗ ಗುರು ಬಾಬಾ ರಾಮ್ ದೇವ್ ರಾಫಿಯಾ ಬೆಂಬಲಕ್ಕೆ ಧಾವಿಸಿದ್ದು, ಯೋಗ ತರಬೇತಿಯ ವಿಷಯದಲ್ಲಿ ಧರ್ಮವನ್ನು ತರಬಾರದು ಎಂದು ಹೇಳಿದ್ದಾರೆ.

Comments are closed.