ರಾಷ್ಟ್ರೀಯ

ಗೆಳೆಯನ ತಾಯಿಯನ್ನೇ ಕಾಮದಾಟಕ್ಕೆ ಕರೆದು ಪೊಲೀಸ್ ಅತಿಥಿಯಾದ ಭೂಪ

Pinterest LinkedIn Tumblr


ಅಲ್ಫುಜಾ: ಗೆಳೆಯನ ವಿಧುವೆ ತಾಯಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಸತೀಶ್ ಪಠಾಣಂತಿಟ್ಟ ಪಟ್ಟಣದ ಕೊನ್ನಿ ಗ್ರಾಮದ ನಿವಾಸಿಯೆಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಮೆಕ್ಯಾನಿಕ್‌ನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಸಂಜೆ ಸತೀಶ್ ತನ್ನ ಗೆಳೆಯನನ್ನು ಭೇಟಿಯಾಗಲು ವಿಧುವೆ ತಾಯಿಯ ಮನೆಗೆ ತೆರಳಿದ. ಮಗ ಮನೆಯಲ್ಲಿಲ್ಲ ಎಂದು ಹೇಳಿದಾಗ ನೀರು ಕೊಡುವಂತೆ ಕೇಳಿ ಮನೆಯನ್ನು ಪ್ರವೇಶಿಸಿ,. ವಿಧುವೆ ಮಹಿಳೆ ನೀರು ಕೊಡಲು ಬಂದಾಗ ಆಕೆಯನ್ನು ಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಗಾಬರಿಗೊಂಡ ಮಹಿಳೆ ಜೋರಾಗಿ ಕೂಗಿದಾಗ ಆರೋಪಿ ಸತೀಶ್ ಅಲ್ಲಿಂದ ಪರಾರಿಯಾಗಿದ್ದಾನೆ. ನೆರೆಹೊರೆಯವರು ಬಂದು ಆಕೆಯನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರೊಂದಿಗೆ ಪೊಲೀಸ್ ಠಾಣೆಗೆ ತೆರಳಿದ ವಿಧುವೆ ಮಹಿಳೆ ಆರೋಪಿ ಸತೀಶ್ ವಿರುದ್ಧ ಅತ್ಯಾಚಾರಕ್ಕೆ ಯತ್ನದ ದೂರು ನೀಡಿದ್ದಾಳೆ. ತೋಟದಲ್ಲಿ ಅಡಗಿದ್ದ ಸತೀಶ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

Comments are closed.