ರಾಷ್ಟ್ರೀಯ

ಸೆಕ್ಸ್‌ ಜಾಲ ನಡೆಸುತ್ತಿದ್ದ ಉಜ್ಬೆಕ್‌ ಮಹಿಳೆಗೆ 1 ವರ್ಷ ಜೈಲು

Pinterest LinkedIn Tumblr


ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸೆಕ್ಸ್‌ ಜಾಲ ನಡೆಸುತ್ತಿದ್ದ 33ರ ಹರೆಯದ ಉಜ್ಬೆಕ್‌ ಮಹಿಳೆ, ಕಳೆದ ಮೂರು ವರ್ಷಗಳಿಂದ ವಿಚಾರಣೆಯನ್ನು ತಪ್ಪಿಸಿಕೊಂಡದ್ದಕ್ಕಾಗಿ ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

2013ರಲ್ಲಿ ಉಜ್ಬೆಕಿಸ್ಥಾನದ ಇನ್ನಿಬ್ಬರು ಮಹಿಳೆಯರನ್ನು ಬಲವಂತದಿಂದ ವೇಶ್ಯಾವೃತ್ತಿಗೆ ಇಳಿಸಿರುವಳೆಂಬ ಆರೋಪದಿಂದ ಈ ಮಹಿಳೆಯನ್ನು ನ್ಯಾಯಾಲಯ ಖುಲಾಸೆ ಗೊಳಿಸಿದೆ.

ಪ್ರಾಸಿಕ್ಯೂಶನ್‌ ಪ್ರಕಾರ ಪಲವನೋವಾ ದಿಲ್‌ಫ‌ುಜಾ ಎಂಬ ಹೆಸರಿನ ಆರೋಪಿ ಮಹಿಳೆಯು ಭಾತೀಯ ವ್ಯಕ್ತಿಯೋರ್ವನನ್ನು ಮದುವೆಯಾಗಿ 2010ರಿಂದ ಭಾರತದಲ್ಲಿ ವಾಸವಾಗಿದ್ದಳು. ಸ್ವಲ್ಪ ಸಮಯದ ಬಳಿಕ ಗಂಡನಿಂದ ಪರಿತ್ಯಕ್ತಳಾದ ಈಕೆ ಉದರಂಭರಣೆಗಾಗಿ ವೇಶ್ಯಾವೃತ್ತಿಗೆ ಇಳಿದಿದ್ದಳು.

2013ರ ಜೂನ್‌ 18ರಂದು ಆಕೆಯನ್ನು ಪೊಲೀಸರು ಬಂಧಿಸಿದ್ದರು. ಈ ಮಹಿಳೆ ತಮ್ಮನ್ನು ಅಕ್ರಮವಾಗಿ ಕೂಡಿ ಹಾಕಿ, ಗ್ಯಾಂಗ್‌ ರೇಪ್‌ಗೆ ಗುರಿಪಡಿಸಿ, ಹಲ್ಲೆ ನಡೆಸಿದ್ದಾಳೆ ಎಂದು ಇನ್ನಿಬ್ಬರು ಉಜ್ಬೆಕ್‌ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದರು.

-ಉದಯವಾಣಿ

Comments are closed.