ರಾಷ್ಟ್ರೀಯ

ಆಫ್ರಿಕಾದಲ್ಲಿ ಬಳಕೆಯಾಗಲಿವೆ ಹಳೆಯ 500, 1000 ನೋಟುಗಳು

Pinterest LinkedIn Tumblr


ತಿರುವನಂತಪುರಂ: ಕಳೆದ ವರ್ಷ ನಿಷೇಧಕ್ಕೊಳಪಟ್ಟ 500 ಮತ್ತು 1000ರದ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌, ದಕ್ಷಿಣ ಆಫ್ರಿಕಾಗೆ ರವಾನೆ ಮಾಡುತ್ತಿದೆ. ಈ ನೋಟುಗಳು ಮುಂದಿನ ವರ್ಷ ದ.ಆಫ್ರಿಕಾದಲ್ಲಿ ನಡೆಯುವ ಚುನಾವಣೆಗೆ ಬಳಕೆಯಾಗಲಿವೆಯಂತೆ. ಅದು ಹೇಗೆ ಎಂಬುದು ಇಲ್ಲಿದೆ. ಓದಿ…..

ಹೌದು! ದೈನಿಕವೊಂದರ ವರದಿ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ 2019ಕ್ಕೆ ಚುನಾವಣೆ ನಡೆಯುಲಿದ್ದು ಇದರ ಪ್ರಚಾರ ಕಾರ್ಯಗಳಿಗಾಗಿ ಹಾರ್ಡ್ ಬೋರ್ಡ್‌ಗಳನ್ನು ಬಳಸಲಾಗುತ್ತಿದೆ. ಈ ಹಾರ್ಡ್‌ಬೋರ್ಡ್‌ಗಳನ್ನು ತಯಾರಿಸಲು ಭಾರತದ ನಿಷೇಧಿತ ನೋಟುಗಳನ್ನು ಬಳಸಿಕೊಳ್ಳಲಾಗುತ್ತದೆಯಂತೆ.

ನೋಟು ನಿಷೇಧದ ಬಳಿಕ ಆರ್‌ಬಿಐಗೆ ಭಾರೀ ಪ್ರಮಾಣದ ನೋಟುಗಳು ಬಂದಿದ್ದವು. ಇವುಗಳನ್ನು ಸುಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಲಿರುವ ಹಿನ್ನಲೆಯಲ್ಲಿ ವೆಸ್ಟರ್ನ್ ಇಂಡಿಯಾ ಪ್ಲೈವುಡ್ಸ್‌ ಎಂಬ ಕಂಪನಿಯನ್ನು ಆರ್‌ಬಿಐ ಸಂಪರ್ಕಿಸಿದೆ.

‘ನಮ್ಮನ್ನು ಸಂಪರ್ಕಿಸಿದ ಆರ್‌ಬಿಐಗೆ ಮೊದಲು ನೋಟಿನ ಸ್ಯಾಂಪಲ್‌ ನೀಡುವಂತೆ ಕೇಳಿಕೊಂಡಿದ್ದೆವು. ನಮ್ಮ ರಿಸರ್ಚ್‌ ತಂಡ ಈ ನೋಟುಗಳನ್ನು ಬಳಕೆ ಮಾಡುವುದನ್ನು ಕಂಡು ಹಿಡಿದಿದ್ದರು. ಅಲ್ಲಿ ನೋಟ್ ಗಳನ್ನು ಬಳಸಿ ಫ್ಲೈವುಡ್ ತಯಾರಿಸಲಾಗಿದೆ. ಈ ಪ್ಲೈವುಡ್‌ಗಳು 2019ರಲ್ಲಿ ದಕ್ಷಿಣ ಆಫ್ರಿಕಾ ಎಲೆಕ್ಷನ್ ಕೆಲಸ ಕಾರ್ಯಗಳಿಗೆ ಪೂರೈಕೆಯಾಗಲಿವೆ’ ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಟಿಐ ಬಾವ ಹೇಳಿದ್ದಾರೆ.

ನೋಟಿನ ಚೂರುಗಳನ್ನು ಹೆಚ್ಚಿನ ಶಾಖದಲ್ಲಿ ಕುದಿಸಲಾಗುತ್ತದೆ. ಬಳಿಕ ಅದನ್ನು ಹಿಟ್ಟಿನ ರೂಪದೊಂದಿಗೆ ಪ್ಲೈವುಡ್ ತಯಾರಿಸಲಾಗಿದೆ. ಸದ್ಯ ಈ ಬೋರ್ಡ್‌ಗಳಿಗೆ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಬೇಡಿಕೆಯಿದೆ ಎಂದು ಬಾವ ಹೇಳಿದ್ದಾರೆ.

ಈವರೆಗೆ 750 ಟನ್‌ ನಿಷೇಧಿತ ನೋಟುಗಳನ್ನು ಪಡೆಯಲಾಗಿದ್ದು ಇವುಗಳನ್ನು ಬೋರ್ಡ್‌ಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ.

Comments are closed.