ರಾಷ್ಟ್ರೀಯ

ಭ್ರಷ್ಟಾಚಾರ ನಡೆಸೋದು ಸುಲಭವಲ್ಲ, ಉದ್ಯಮ ನಡೆಸೋದು ಸುಲಭ: ರಾಹುಲ್‌ ಟ್ವೀಟ್‌ಗೆ ಜೇಟ್ಲಿ ತಿರುಗ…

Pinterest LinkedIn Tumblr
New Delhi: Union Finance Minister Arun Jaitley

ಹೊಸದಿಲ್ಲಿ: ಭಾರತದಲ್ಲಿ ಉದ್ಯಮ ನಡೆಸುವುದು ಸುಲಭವಾಗಿದೆ ಎಂಬ ವಿಶ್ವ ಬ್ಯಾಂಕ್‌ ವರದಿಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಯನ್ನು ವಿತ್ತಸಚಿವ ಅರುಣ್ ಜೇಟ್ಲಿ ಖಂಡಿಸಿದ್ದಾರೆ.

ಎನ್‌ಡಿಎ ಸರಕಾರದ ಮಹತ್ವಾಕಾಂಕ್ಷೆಯ ಆರ್ಥಿಕ ಸುಧಾರಣೆಗಳು ಎಂದು ಹೇಳಲಾಗುತ್ತಿರುವ ನೋಟು ನಿಷೇಧ ಮತ್ತು ಜಿಎಸ್‌ಟಿ ದೆಸೆಯಿಂದಾಗಿ ಭಾರತದಲ್ಲಿ ಉದ್ಯಮ ನಡೆಸುವುದು ಕಠಿಣವಾಗಿದೆ. ವಾಸ್ತವದಲ್ಲಿ ಇವೆರಡು ಭಾರತದ ಅರ್ಥವ್ಯವಸ್ಥೆಯನ್ನೇ ನಾಶಮಾಡಿವೆ ಎಂದು ರಾಹುಲ್‌ ಟ್ವಿಟ್ರ್‌ನಲ್ಲಿ ಟೀಕಿಸಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜೇಟ್ಲಿ, ‘ಯುಪಿಎ ಮತ್ತು ಎನ್‌ಡಿ ನಡುವಿನ ವ್ಯತ್ಯಾಸ ಗಮನಿಸಿ- ಭ್ರಷ್ಟಾಚಾರ ನಡೆಸುವುದು ಸುಲಭ ಎನ್ನುವಂತ ಸ್ಥಿತಿ ಬದಲಾಗಿ ಉದ್ಯಮ ನಡೆಸುವುದು ಸುಲಭ ಎಂಬ ಪರಿಸ್ಥಿತಿ ಬಂದಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಯುಪಿಎ-2ರ ಅವಧಿಯಲ್ಲಿ ನಡೆದ ಹಲವು ಭ್ರಷ್ಟಾಚಾರ ಪ್ರಕರಣಗಳ ಪೈಕಿ ಕಾಮನ್ವೆಲ್ತ್‌ ಗೇಮ್ಸ್‌ ಹಗರಣ, ಕಲ್ಲಿದ್ದಲು ಹಗರಣ ಮತ್ತು 2ಜಿ ಹಗರಣಗಳನ್ನು ನಿರ್ದಿಷ್ಟವಾಗಿ ಜೇಟ್ಲಿ ಉಲ್ಲೇಖಿಸಿದ್ದಾರೆ.

ವಿಶ್ವ ಬ್ಯಾಂಕ್ ಹೇಳಿದ್ಧಾದ್ರು ಒಪ್ಕೋಳಪ್ಪ ಮಾರಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಅಂದ್ರೆ ನಿಮ್ಗೆ ಜಾಸ್ತಿನೇ ಆಗಿದೆ ಅದು ಎಲ್ಲಾರ್ಗ್ ಗೊತ್ತು ಇದ್ದಿದ್ದು ಲಕ್ಷ ಲಕ್ಷ ಕೋಟಿಗಳು ಹೊಯ್ತು ಕರ್ನಾಟಕ ಬಿಟ್ರೆ ಯಾವ ರಾಜ್ಯದ…+

ಇದಕ್ಕೆ ಮೊದಲು ರಾಹುಲ್‌, ದೇಶವೆಲ್ಲ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದರೂ ‘ಡಾ. ಜೇಟ್ಲಿ’ ಆರ್ಥಿಕ ಪ್ರಗತಿಯ ಭ್ರಮೆಯಲ್ಲಿ ಮುಳುಗಿದ್ದಾರೆ ಎಂದು ಗೇಲಿ ಮಾಡಿದ್ದರು.

Comments are closed.