ರಾಷ್ಟ್ರೀಯ

ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಸಿಕ್ಕಿತು ಬರೋಬರಿ 639 ಮೊಳೆಗಳು !

Pinterest LinkedIn Tumblr

ಕೋಲ್ಕತ್ತ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ 639 ಲೋಹದ ಮೊಳೆಗಳು ಪತ್ತೆಯಾಗಿದ್ದು, ಆ ವ್ಯಕ್ತಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮೊಳೆಗಳನ್ನು ಹೊರತೆಗೆಯಲಾಗಿದೆ.

ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ರಾಜ್ಯದ ಉತ್ತರ 24 ಪರಗಣ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಆ ವ್ಯಕ್ತಿ ಸಾಕಷ್ಟು ದಿನಗಳಿಂದ ಮೊಳೆ ಹಾಗೂ ಮಣ್ಣು ನುಂಗುತ್ತಿದ್ದರು. ಕಲ್ಕತ್ತಾ ವೈದ್ಯಕೀಯ ಕಾಲೇಜಿನ ವೈದ್ಯರು, ಹೊಟ್ಟೆಯನ್ನು 10 ಸೆಂ.ಮೀ.ನಷ್ಟು ಸೀಳಿ ಅಂದಾಜು 1 ಕೆ.ಜಿ. ತೂಕದ ಮೊಳೆಗಳನ್ನು ಆಯಸ್ಕಾಂತ ಬಳಸಿ ಹೊರ ತೆಗೆಯಲಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯ ಸಿದ್ಧಾರ್ಥ ಬಿಸ್ವಾಸ್ ತಿಳಿಸಿದ್ದಾರೆ.

‘ವ್ಯಕ್ತಿಯ ದೇಹಸ್ಥಿತಿ ಈಗ ಸ್ಥಿರವಾಗಿದ್ದು, ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

Comments are closed.