ರಾಷ್ಟ್ರೀಯ

ನೋಟು ನಿಷೇಧದ ಟೀಕೆಯ ವಿರುದ್ಧ ಬೃಹತ್ ಜಾಗೃತಿ ಅಭಿಯಾನ

Pinterest LinkedIn Tumblr

note-ban
ನವದೆಹಲಿ (ಡಿ,29): ನೋಟು ಅಮಾನ್ಯ ಕ್ರಮದ ವಿರುದ್ಧ ದೇಶದಾದ್ಯಂತ ವ್ಯಕ್ತವಾಗುತ್ತಿರುವ ಟೀಕೆಗೆ ಪ್ರತ್ತ್ಯುತ್ತರ ನೀಡಲು ಸರ್ಕಾರವು ಬೃಹತ್ ಜಾಗೃತಿ ಅಭಿಯಾನ ನಡೆಸಲು ಉದ್ದೇಶಿಸಿದೆ ಎಂದು ವರದಿಯಾಗಿದೆ.
ಡಿ.31ರಂದು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದೊಂದಿಗೆ ಅಭಿಯಾನವು ಆರಂಭವಾಗಲಿದೆ. ಕನಿಷ್ಠ 10 ಕಡೆ ಸಭೆ-ರ್ಯಾಲಿಗಳಲ್ಲಿ ಭಾಗವಹಿಸುವಂತೆ ಪ್ರತಿಯೊಬ್ಬ ಕೇಂದ್ರ ಸಚಿವರಿಗೆ ಸೂಚಿಸಲಾಗಿದೆ. ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ನೋಟು ಅಮಾನ್ಯ ಕ್ರಮದ ಪ್ರಯೋಜನಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡುವಂತೆ ಸಚಿವರಿಗೆ ತಿಳಿಸಲಾಗಿದೆ.
ಆ ಹತ್ತು ಸ್ಥಳಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳು ಒಳಗೊಂಡಿರಬೇಕು, ಹಾಗೂ ಚುನಾವಣೆ ಎದುರಿಸಲಿರುವ ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಹೆಚ್ಚು ಒತ್ತು ನೀಡಬೇಕೆಂದು ಸಚಿವರಿಗೆ ಹೇಳಲಾಗಿದೆ ಎಂದು ಏಎನ್ಐ ವರದಿ ಮಾಡಿದೆ.
ನೋಟು ಅಮಾನ್ಯ ಕ್ರಮದ ಪ್ರಯೋಜನಗಳ ಕುರಿತು ಹಣಕಾಸು ಸಚಿವಾಲಯವು 60-ಪುಟಗಳ ಕಿರುಪುಸ್ತಕವನ್ನು ಸಚಿವರಿಗೆ ವಿತರಿಸಿದ್ದು, ಅವುಗಳನ್ನು ಜನರ ಬಳಿ ಕೊಂಡೊಯ್ಯುವಂತೆ ಸೂಚಿಸಲಾಗಿದೆ.
ಅಭಿಯಾನ ಸಂದರ್ಭದಲ್ಲಿ ರೇಡಿಯೋ, ಟೀವಿ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆಯೂ ಸಚಿವರಿಗೆ ಸೂಚಿಸಲಾಗಿದೆ.

Comments are closed.